ರಾಷ್ಟ್ರೀಯ

ಚುನಾವಣೋತ್ತರ ಸಮೀಕ್ಷೆ: ತ.ನಾಡಲ್ಲಿ ಕರುಣಾನಿಧಿ, ಕೇರಳದಲ್ಲಿ ಎಡರಂಗಕ್ಕೆ ಅಧಿಕಾರ

Pinterest LinkedIn Tumblr

jayalalitha-karunanidhi

ನವದೆಹಲಿ: ಬಹು ನಿರೀಕ್ಷಿತ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸೋಮವಾರ ಅಂತ್ಯಗೊಂಡಿದ್ದು, ತಮಿಳುನಾಡಲ್ಲಿ ಆಡಳಿತ ವಿರೋಧಿ ಅಲೆಯಿಂದ ಮುಖ್ಯಮಂತ್ರಿ ಜೆ.ಜಯಲಲಿತಾ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.

ಈ ಬಾರಿ ಮತದಾರ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಕೈಹಿಡಿಯುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.

ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, ಒಟ್ಟು 234 ಸದಸ್ಯ ಬಲ ಹೊಂದಿರುವ ತಮಿಳುನಾಡಿನಲ್ಲಿ ಎಐಎಡಿಎಂಕೆ 89ರಿಂದ 101 ಸ್ಥಾನ ಪಡೆದರೆ, ಡಿಎಂಕೆ ಹಾಗೂ ಕಾಂಗ್ರೆಸ್ 124ರಿಂದ -140 ಸ್ಥಾನ, ಬಿಜೆಪಿ 0ಯಿಂದ 3 ಸ್ಥಾನ ಹಾಗೂ ಇತರರು 4ರಿಂದ 10 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಇನ್ನೂ ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ, ಎಐಎಡಿಎಂಕೆ 95ರಿಂದ 99 ಸ್ಥಾನ ಪಡೆದರೆ, ಡಿಎಂಕೆ ಹಾಗೂ ಕಾಂಗ್ರೆಸ್ 114ರಿಂದ -118 ಸ್ಥಾನ, ಡಿಎಂಡಿಕೆ 14 ಹಾಗೂ ಇತರರು 13 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಕೇರಳದಲ್ಲಿ ಎಡರಂಗಕ್ಕೆ ಅಧಿಕಾರ
ಕೇರಳದಲ್ಲಿ ಸಿಪಿಎಂ ನೇತೃತ್ವದ ಎಡರಂಗಕ್ಕೆ ಅಧಿಕಾರ ಸಿಗುವ ಸಾಧ್ಯತೆ ಇದೆ.ಒಟ್ಟು 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಎಲ್ ಡಿಎಫ್ ಗೆ 78 ಸ್ಥಾನ, ಯುಡಿಎಫ್ ಗೆ 58 ಸ್ಥಾನ, ಎನ್ ಡಿಎಗೆ 2 ಹಾಗೂ ಇತರರಿಗೆ ಎರಡು ಸ್ಥಾನ ದೊರೆಯಲಿವೆ ಎಂದು ಸಿವೋಟರ್ ಸಮೀಕ್ಷೆ ಹೇಳಿದೆ.

ಇನ್ನು ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ, ಎಲ್ ಡಿಎಫ್ 88ರಿಂದ 101, ಯುಡಿಎಫ್ 38ರಿಂದ 48, ಎನ್ ಡಿಎ 0ಯಿಂದ 3 ಹಾಗೂ ಇತರರು 1ರಿಂದ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

Write A Comment