
ಮುಂಬೈ: ಬಾಲಿವುಡ್ ನಟಿ ಅಮ್ರಿತಾ ರಾವ್ ತಮ್ಮ ಬಹುದಿನಗಳ ಗೆಳೆಯ ರೇಡಿಯೋ ಜಾಕಿಯಾಗಿರುವ ಅನ್ಮೋಲ್ ಅವರ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಹೌದು. ನಟಿ ಅಮ್ರಿತಾ ರಾವ್ ಹಾಗೂ ಅನ್ಮೋಲ್ 7 ವರ್ಷಗಳಿಂದ ಒಬ್ಬರನೊಬ್ಬರು ಇಷ್ಟಪಡುತ್ತಿದ್ದು, ನಿನ್ನೆ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. 7 ವರ್ಷದ ಹಿಂದೆ ಅನ್ಮೋಲ್ ಅಮ್ರಿತಾ ರಾವ್ ಅವರ ಸಂದರ್ಶನ ನಡೆಸಿದ್ದಾಗ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು, ಇದೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿಹಕ್ಕಿಗಳು ಮದುವೆಯಾಗಿರುವ ಬಗ್ಗೆ ಖುದ್ದು ಅನ್ಮೋಲ್ ಟ್ವಿಟ್ಟರ್‍ನಲ್ಲಿ ತಿಳಿಸಿದ್ದರು. ಅಮ್ರಿತಾ ರಾವ್ ಬಾಲಿವುಡ್‍ಗೆ ವಿವಾಹ್ ಸಿನಿಮಾ ಮೂಲಕ ಪಾದರ್ಪಣೆ ಮಾಡಿದ್ದರು. ಈ ವೇಳೆ ನಟ ಶಾಹೀದ್ ಕಪೂರ್ ಜೊತೆಗೆ ಪ್ರೀತಿಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಶಾಹೀದ್ ಹಾಗೂ ಅಮ್ರಿತಾ ಬೇರೆ ಬೇರೆಯಾಗಿದ್ದರು.