ರಾಷ್ಟ್ರೀಯ

ತಮಿಳುನಾಡು, ಪುದುಚೇರಿ, ಕೇರಳ ವಿಧಾನಸಭೆಗಳಿಗೆ ಚುನಾವಣೆ: ಬಿರುಸಿನ ಮತದಾನ

Pinterest LinkedIn Tumblr

Hubli: People in queue to caste their vote for Karnataka assembly elections at Rotary Deaf School booth in Hubli on Sunday. PTI Photo(PTI5_5_2013_000037B)

ಚೆನ್ನೈ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ನಿಮಿತ್ತ ಸೋಮವಾರ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಬಿರುಸಿನಿಂದ ಮತದಾನವ ಪ್ರಕ್ರಿಯೆ ಆರಂಭವಾಗಿದೆ.

ತಮಿಳುನಾಡಿನ 233, ಕೇರಳದ 140 ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಮೂರೂ ರಾಜ್ಯಗಳಲ್ಲಿಯೂ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಇನ್ನು ಇದಕ್ಕೂ ಮೊದಲು ನಡೆದಿದ್ದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನ ಫಲಿತಾಂಶವನ್ನು ಈ ಮೂರು ರಾಜ್ಯಗಳೊಂದಿಗೆ ಸೇರಿಸಿ ಮೇ.19ರಂದು ಪ್ರಟಗೊಳಿಸಲಾಗುತ್ತದೆ.

ತಮಿಳುನಾಡು ಸಿಎಂ ಜಯಲಲಿತಾ, ಪ್ರತಿಪಕ್ಷ ನಾಯಕ ಕರುಣಾನಿಧಿ, ನಟ ವಿಜಯ್ ಕಾಂತ್ ಸೇರಿದಂತೆ ಘಟಾನುಘಟಿ ನಾಯಕರು ಕಣದಲ್ಲಿದ್ದು, ತಮಿಳುನಾಡಿನಲ್ಲಿ ಒಟ್ಟು 3,740 ಅಭ್ಯರ್ಥಿಗಳಿದ್ದು, 5.79 ಕೋಟಿ ಮತದಾರರ ಕೈಯಲ್ಲಿ ಇವರ ಭವಿಷ್ಯ ಅಡಗಿದೆ. ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಎಐಎಡಿಎಂಕೆ ಮತ್ತು ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ನಡುವೆ ಪ್ರಬಲ ಸ್ಪರ್ಧೆ ನಿರೀಕ್ಷಿಸಲಾಗಿದೆ. ಪುದುಚೇರಿಯಲ್ಲಿ 344 ಅಭ್ಯರ್ಥಿಗಳು ಕಣದಲ್ಲಿದ್ದು, 9.41 ಲಕ್ಷ ಮತದಾರರಿದ್ದಾರೆ. ಸಿಎಂ ಜಯಲಲಿತಾ ಮತ್ತೆ ಅಧಿಕಾರದಲ್ಲಿ ಮುಂದುವರೆಯುವ ವಿಶ್ವಾಸವ್ಯಕ್ತ ಪಡಿಸಿದ್ದಾರೆ. ಅತ್ತ ಕೇರಳದಲ್ಲಿ ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿ ಇಲ್ಲಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಈ ರಾಜ್ಯದಲ್ಲಿ 2.6 ಕೋಟಿ ಮತದಾರರು 1203 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಮತದಾನದ ಅವಧಿ 2 ಗಂಟೆ ಹೆಚ್ಚಳ
ಇನ್ನು ಬೇಸಿಗೆ ಹಿನ್ನಲೆಯಲ್ಲಿ ಬಿರು ಬಿಸಿಲಿನಲ್ಲಿ ಸರತಿ ಸಾಲಲ್ಲಿ ನಿಂತು ಮತದಾನ ಮಾಡಲು ಜನ ಹಿಂದೇಟು ಹಾಕುವ ಸಂಭವವಿರುವುದರಿಂದ ಚುನಾವಣಾ ಆಯೋಗ ಮತದಾನದ ಅವಧಿಯನ್ನು 2 ಗಂಟೆಗಳ ಕಾಲ ಹೆಚ್ಚಿಸಿದೆ. ಅದರಂತೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 7 ಗಂಟೆಯವರೆಗೂ ಮತದಾನ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

Write A Comment