ಕರ್ನಾಟಕ

‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ ಬ್ಯುಸಿಯಾಗಿ ಶಿವರಾಜ್ ಕುಮಾರ್ ! ಶಿವಣ್ಣನ ಬಗ್ಗೆ ನಿರ್ದೇಶಕ ಹೇಳಿದ ಮಾತೇನು..?

Pinterest LinkedIn Tumblr

Bangara Son of Bangarada Manushya Shooting set

ಸ್ಯಾಂಡಲ್ ವುಡ್ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಯುವ ನಿರ್ದೇಶಕರಿಗೂ ಒಗ್ಗುವಂತ ಸ್ಟಾರ್ ನಟರಂತೆ.

ಸದ್ಯ ಶ್ರೀಕಂಠ ಚಿತ್ರದ ಟಾಕಿ ಪೋರ್ಷನ್ ಮುಗಿಸಿರುವ ಶಿವಣ್ಣ ಅವರು ಯುವ ನಿರ್ದೇಶಕ ಯೋಗಿ ಜಿ ರಾಜ್ ಅವರ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಶಿವಣ್ಣ ಬಗ್ಗೆ ಮಾತನಾಡಿರುವ ನಿರ್ದೇಶಕ ಯೋಗಿ ಅವರು, ಶಿವಣ್ಣ ನಿಜವಾಗಲು ಪಾದರಸದಂತೆ ಕೆಲಸ ಮಾಡುತ್ತಾರೆ. ಸ್ಟಾರ್ ನಟ ಎಂಬ ಬಿಗುಮಾನವಿಲ್ಲದೆ ಯುವ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಟಿಸುತ್ತಾರೆ. ಅವರ ಈ ಸಮಯ ಪ್ರಜ್ಞೆ, ಸ್ವಭಾವ ನಿಜಕ್ಕೂ ಅದ್ಭುತ ಎಂದರು.

ಇನ್ನು ಚಿತ್ರಕ್ಕೆ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಎಂದು ಶೀರ್ಷಿಕೆ ಇಟ್ಟಿದ್ದು, ಡಾ. ರಾಜಕುಮಾರ್ ಅವರ ಹಿಂದಿನ ಬಂಗಾರದ ಮನುಷ್ಯ ಚಿತ್ರಕ್ಕೂ ಈ ಚಿತ್ರಕ್ಕೂ ಹೋಲಿಕೆ ಇಲ್ಲ. ಈ ಚಿತ್ರದಲ್ಲಿ ತಂದೆ ಮಗನ ನಡುವಿನ ಭಾವನಾತ್ಮಕತೆಯಿಂದ ಕೂಡಿದೆ ಎಂದರು.

ಜಯಣ್ಣ ಕಂಬೈನ್ಸ್ ನಲ್ಲಿ ಮೂಡಿಬರುತ್ತಿರುವ ಬಂಗಾರದ ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದ ನಾಯಕಿ ವಿದ್ಯಾ ಪ್ರದೀಪ್ ಚಿತ್ರತಂಡವನ್ನು ಸೇರಿದ್ದಾರೆ. ಇನ್ನು ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ರಾಯಿಸ್ ಚಿತ್ರದ ಆ್ಯಕ್ಷನ್ ಗಳನ್ನು ಮುಗಿಸಿರುವ ಸಾಹಸ ನಿರ್ದೇಶಕ ರವಿವರ್ಮಾ ಶಿವಣ್ಣ ಕೈಯಿಂದ ಅದ್ಭುತ ಸಾಹಸಗಳನ್ನು ಮಾಡಿಸುತ್ತಿದ್ದಾರೆ.

ಇನ್ನು ಮೂರನೇ ಶೆಡ್ಯೂಲ್ ಚಿತ್ರೀಕರಣಕ್ಕಾಗಿ ಚಿತ್ರತಂಡ ಮೇ 23ರಂದು ವಿದೇಶಕ್ಕೆ ಹಾರಲಿದೆ. ಮಿಲನ್ ಹಾಗೂ ಸ್ವಿಜರ್ಲ್ಯಾಂಡ್ ನಲ್ಲಿ ಚಿತ್ರದ ಹಾಡುಗಳು ಹಾಗೂ ಕೆಲ ಭಾಗದ ಚಿತ್ರೀಕರಣ ಮಾಡಲಿದೆ.

Write A Comment