ರಾಷ್ಟ್ರೀಯ

ಮೇ 31ಕ್ಕೆ ದಕ್ಷಿಣ ಕೇರಳಕ್ಕೆ ಮುಂಗಾರು ಮಾರುತ ಪ್ರವೇಶ

Pinterest LinkedIn Tumblr

Monsoon-in-India

ನವದೆಹಲಿ: ಮುಂಗಾರು ಇದೇ ತಿಂಗಳು 31ರ ಒಳಗೆ ದಕ್ಷಿಣ ಕೇರಳ ಪ್ರವೇಶಿಸುವ ಸಂಭವ ಇದೆ.
ಮುಂಗಾರು ಮಳೆ ಮೇ 31ರ ಸುಮಾರಿಗೆ

ದಕ್ಷಿಣ ಕೇರಳಕ್ಕೆ ಪ್ರವೇಶಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಎಸ್. ಚೌಧುರಿ ಸಂಸತ್‌ನಲ್ಲಿ ತಮ್ಮ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ಹಾಗೆಯೇ ಮುಂಗಾರು ಮಳೆ ಆಗಮನ, ಪ್ರಮಾಣ ಕುರಿತಂತೆ ಮೇ 15 ರಂದು ಮುನ್ಸೂಚನೆ ನೀಡಲಾಗುವುದು ಎಂದೂ ಹೇಳಿದ್ದಾರೆ.

ಅಂಡಮಾನ್ ಸಮುದ್ರ ಭಾಗದ ಮೂಲಕ ದಕ್ಷಿಣ ಕೇರಳಕ್ಕೆ ಮುಂಗಾರು ಪ್ರವೇಶಿಸುತ್ತಿತ್ತು. ಕೇರಳಕ್ಕೆ ಈ ಮಾಸಾಂತ್ಯಕ್ಕೆ ಪ್ರವೇಶಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯೂ ಹೇಳಿದೆ.

ಭಾರತೀಯ ಹವಾಮಾನ ಇಲಾಖೆ 2014-15ನೇ ಸಾಲಿನಲ್ಲಿ ಮುಂಗಾರು ಮಳೆ ಕುರಿತಂತೆ ಮುನ್ಸೂಚನೆಗಳು ಸರಿಯಾಗಿದ್ದವು ಹಾಗೂ ಕಳೆದ 10 ವರ್ಷಗಳಲ್ಲಿಯ ಅದರ ಮುನ್ಸೂಚನೆಯೂ ತುಸು ಹೆಚ್ಚುಕಮ್ಮಿ ಕರಾರುವಕ್ಕಾಗಿದೆ.

Write A Comment