ಬೆಂಗಳೂರು: ಜುಲೈ 4ಕ್ಕೆ ಮೇಲ್ಮನೆಯ ನಾಲ್ವರು ಸದಸ್ಯರ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಜೂನ್ 9ರಂದು ಪರಿಷತ್ ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಜೂನ್ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಮಹಾಂತೇಶ್ ಶಿವಾನಂದ ಕೌಜಲಗಿ, ಅರುಣ್ ಶಹಾಪುರ್, ಗೋ. ಮಧುಸೂದನ್, ಬಸವರಾಜ್ ಹೊರಟ್ಟಿ ಸೇರಿದಂತೆ ನಾಲ್ವರ ವಿಧಾನಪರಿಷತ್ ಸದಸ್ಯತ್ವದ ಅವಧಿ ಮುಕ್ತಾಯವಾಗಲಿದೆ. ಆ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕ ಪ್ರಕಟವಾಗಿದೆ.
*ಮೇ 16ಕ್ಕೆ ಚುನಾವಣೆ ಅಧಿಸೂಚನೆ ಪ್ರಕಟ
*ಜೂನ್ 9ರಂದು ಚುನಾವಣೆ
*ಮೇ 23 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ
*ಮೇ 26 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ
*ಜೂನ್ 13ರಂದು ಮತಎಣಿಕೆ, ಫಲಿತಾಂಶ ಪ್ರಕಟ
-ಉದಯವಾಣಿ