
ನವದೆಹಲಿ: ಇನ್ನು ಕೇವಲ 36 ರನ್ ಸಿಡಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ್ ರನ್ ಪೇರಿಸಿದ ಕೀರ್ತಿಗೆ ಭಾಜನರಾಗಲಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಆಲಿಸ್ಟರ್ ಕುಕ್, ಭಾರತದ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿಯಲಿದ್ದಾರೆ.
ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೇರಿಸಿದಾಗ 31 ವರ್ಷದ 10 ತಿಂಗಳು ವಯಸ್ಸಾಗಿತ್ತು. ಆದರೆ ಇದೀಗ 31ರ ಹರೆಯಕ್ಕೆ ಕಾಲಿಟ್ಟಿರುವ ಕುಕ್, ಈಗಾಗಲೇ 9964 ರನ್ ಸಿಡಿಸಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 10,000 ರನ್ ಪೂರೈಸುವ ಮೂಲಕ ಈ ಸಾಧನೆಗೈದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2005ರಲ್ಲಿ ಸಚಿನ್ ಪಾಕಿಸ್ತಾನ ವಿರುದ್ಧ 10 ಸಾವಿರದ ಗಡಿ ದಾಟುವ ಮೂಲಕ ವಿಶ್ವದ ಕಿರಿಯ ಆಟಗಾರ ಎಂಬ ಗೌರವಕ್ಕೆ ಭಾಜನರಾಗಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ 28 ಶತಕ ಹಾಗೂ 47 ಅರ್ಧ ಶತಕ ಸಿಡಿಸಿರುವ ಕುಕ್, ಕಳೆದ ವರ್ಷ ಪಾಕಿಸ್ತಾನದ ವಿರುದ್ಧ 836 ನಿಮಿಷ ಕ್ರೀಸ್ ಕಚ್ಚಿ ಬ್ಯಾಟಿಂಗ್ ಮಾಡಿ 263 ರನ್ ಸಿಡಿಸಿದ್ದರು. ಅತೀ ಹೆಚ್ಚು ಸಮಯ ಬ್ಯಾಟಿಂಗ್ ಕಾಯ್ದುಕೊಂಡ ಕ್ರಿಕೆಟಿಗ ಎಂಬ ದಾಖಲೆ ಕೂಡ ಇವರ ಹೆಸರಿಗಿದೆ.