
ವರದಿ : ಈಶ್ವರ ಎಂ. ಐಲ್/ಚಿತ್ರ : ದಿನೇಶ್ ಕುಲಾಲ್
ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು ಮತ್ತು ಕರ್ನಾಟಕ ಸಂಘ ಮುಂಬಯಿ ಹಾಗೂ ಎಂ. ಟಿ. ಪೂಜಾರಿ ಅಭಿನಂದನ ಸಮಿತಿ ಮುಂಬಯಿ ಜಂಟಿ ಆಯೋಜನೆಯಲ್ಲಿ ಸಾಂಸ್ಕೃತಿಕ ಕಲಾ ಉತ್ಸವವು ಮಾ. 25ರಂದು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಡಾ| ಎಂ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಮಾತನಾಡುತ್ತಾ, ಕಲಾವಿದರ ಆರೋಗ್ಯ, ಅವರ ಮಕ್ಕಳ ಶಿಕ್ಷಣಕ್ಕೆ ಹಾಗೂ ಆರ್ಥಿಕವಾಗಿ ಹಿಂದುಳಿದ ಕಲಾವಿದರ ಸಹಾಯಕ್ಕಾಗಿ ಪರಿಷತ್ತು ಕ್ರೀಯಾಶೀಲವಾಗಿದೆ. ಯಾವುದೇ ಸಂಸ್ಕೃತಿ ಉಳಿಯಬೇಕಾದರೆ ಕಲೆ ಉಳಿಯಬೇಕು. ಕಲೆ ಉಳಿಯಬೇಕಾದರೆ, ಕಲಾವಿದರ ರಕ್ಷಣೆ ಅಗತ್ಯವಾಗಿದ್ದು, ಅದಕ್ಕಾಗಿ ಕಲಾವಿದರ ಮಾಹಿತಿಯನ್ನು ಹೊಂದಿ ರುವ ಕೈಪಿಡಿಯನ್ನು ಪರಿಷತ್ತು ಹೊರ ತರುತ್ತಿದೆ. ಈ ಯೋಜನೆಗೆ ಎಲ್ಲ ಕಲಾವಿದರು ಸಹಕರಿಸಬೇಕು ಎಂದರು.

ಗೌರವ ಅತಿಥಿಯಾಗಿ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ,ಸೆಂಟ್ರಲ್ ಹಾಸ್ಪಿಟಲ್ ಭಾಂಡೂಪ್ ಇದರ ಡಾ| ರತ್ನಾಕರ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು.
ವಿಕಾಸ್ ಟ್ರಾನ್ಸ್‌ಪೊರ್ಟ್ ವಿಕ್ರೋಲಿ ಇದರ ಚಂದ್ರಹಾಸ ಶೆಟ್ಟಿ, ಉದ್ಯಮಿ ಸುರೇಶ್ ಶೆಟ್ಟಿ ಗಂಧರ್ವ, ಕನ್ನಡಿಗ ಕಲಾವಿದರ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜು ಶ್ರೀಯಾನ್ ಉಪಸ್ಥಿತರಿದ್ದರು.
ನವಿಮುಂಬಯಿ ಮಾಜಿ ನಗರ ಸೇವಕಿ, ಅನಿತಾ ಎಸ್. ಶೆಟ್ಟಿ, ಯಕ್ಷಮಾನಸ ಮುಂಬಯಿಯ ಅಧ್ಯಕ್ಷ ಶೇಖರ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ, ಚಂದ್ರಶೇಖರ ಪಾಲೆತ್ತಾಡಿ, ಬಿಎಫ್‌ಎಲ್ ಇದರ ನಿರ್ದೇಶಕ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾದ್ ಆನಂದ ಶೆಟ್ಟಿ ಎಕ್ಕಾರು, ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.
ಪರಿಷತ್ತಿನ ಸ್ಥಾಪಕಾಧ್ಯಕ್ಷ ಎಸ್. ಟಿ ವಿಜಯಕುಮಾರ್ ತಿಂಗಳಾಯ, ಗೌರವ ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಸಂಚಾಲಕ ರಮೇಶ್ ಶಿವಪುರ, ಎಂ. ಟಿ. ಪೂಜಾರಿ ಅಭಿಮಾನಿ ಬಳಗದ ಚಂದ್ರಶೇಖರ ವಿ. ಶೆಟ್ಟಿ, ಕುಕ್ಕೆಹಳ್ಳಿ ವಿಠಲ ಪ್ರಭು, ಗುಣಪಾಲ ಉಡುಪಿ, ಸಂಪತ್ ಶೆಟ್ಟಿ ಪಂಜದಗುತ್ತು, ಸಂಜೀವ ಶೆಟ್ಟಿ ಮತ್ತು ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪರಿಷತ್ತುವಿನ ಉಪಾಧ್ಯಕ್ಷ ಕಮಲಾಕ್ಷ ಸರಾಫ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸುಮಂಗಳಾ ಶೆಟ್ಟಿ ಮತ್ತು ಸುಶೀಲಾ ದೇವಾಡಿಗ ಪ್ರಾರ್ಥನೆಗೈದರು. ಮೋಹನ್ ರೈ ಹಾಗೂ ದಯಾಸಾಗರ್ ಚೌಟ ಅವರು ಕಾರ್ಯಕ್ರಮ ನಿರೂಪಿಸಿದರು.