
ಕೋಲ್ಕತ್ತಾ: ಗಂಡ ಎಂತಹವನೇ ಆಗಿರಲಿ ಹೊಂದಿಕೊಂಡು ಜೀವನ ನಡೆಸುವ ಹೆಣ್ಣು ಮಕ್ಕಳೇ ಹೆಚ್ಚು. ಅದರಲ್ಲೂ ಬೆಡ್ ರೂಂ ಗುಟ್ಟನ್ನ ಹೊರಗೆ ಬಿಟ್ಟು ಕೊಡುವುದಿಲ್ಲ.. ಲೈಂಗಿಕ ತೃಪ್ತಿ ನೀಡದಿದ್ದರೂ ತಲೆ ಬಗ್ಗಿಸಿ ಬಾಳುತ್ತಾರೆ. ಆದರೆ, ಕೋಲ್ಕತ್ತಾ ಬಳಿಯ ಹಳ್ಳಿಯೊಂದರ ಯುವತಿ ತನ್ನ ಲೈಂಗಿಕ ಆಸಕ್ತಿ ತೀರಿಸದ ಗಂಡಸ್ತನವಿಲ್ಲದ ಗಂಡನಿಗೆ ವಿಚ್ಛೇದನಾ ನೀಡಿದ್ದಾಳೆ. ಅಷ್ಟೇ ಅಲ್ಲ, ಮದುವೆ ಸಂದರ್ಭ ನೀಡಿದ್ದ 5500 ರೂ. ವರದಕ್ಷಿಣೆ ಹಣ ಮತ್ತು 55 ಸಾವಿರೂ ಬೆಲೆಯ ಆಸ್ತಿಯನ್ನ ವಾಪಸ್ ಪಡೆದಿದ್ದಾಳೆ.
ಇತ್ತೀಚೆಗಷ್ಟೆ ವಾಸಿಂ ಜಾಫರ್ ಎಂಬಾತನನ್ನ ವಿವಾಹವಾಗಿದ್ದ ಫಾತಿಮಾಗೆ ಮೊದಲ ರಾತ್ರಿಯೇ ಗಂಡನ ಬಂಡವಾಳ ಗೊತ್ತಾಗಿದೆ. ಎರಡು ವಾರ ಸಹನೆಯಿಂದಿದ್ದ ಫಾತಿಮಾ(ಹೆಸರು ಬದಲಿಸಲಾಗಿದೆ) ಊರಿಗೆ ತೆರಳಿ ತಮ್ಮ ಹಿರಿಯ ಜೊತೆ ವಿಷಯ ಹೇಳಿಕೊಂಡಿದ್ದಾಳೆ. ಬಳಿಕ ಬಳಿಕ ಹಳ್ಳಿಗರೇ ನಿರ್ಮಿಸಿಕೊಂಡಿರುವ ಸ್ತ್ರೀಶಕ್ತಿ ಪ್ರೋಕಲ್ಪೋದಲ್ಲಿ ಚರ್ಚೆ ನಡೆದು, ಎರಡೂ ಕುಟುಂಬದ ನಡುವೆ ಈ ಬಗ್ಗೆ ಮಾತುಕತೆ ನಡೆದು ವಿಚ್ಛೇದನಾ ಪಡೆಯಲಾಗಿದೆ.
`ಮೊದಲ ರಾತ್ರಿಯೇ ನನ್ನ ಗಂಡನ ಮರ್ಮಾಂಗದ ನಿಮಿರುವಿಕೆ ಸಮಸ್ಯೆ ಇರುವುದು ನನಗೆ ಗೊತ್ತಾಯ್ತು.. ಹಾಗಾಗಿ ಬಹಿರಂಗವಾಗಿ ನನ್ನ ಹಿರಿಯರ ಬಳಿ ಹೇಳಿದೆ. ಕೆಲವರು ನನ್ನ ಬಗ್ಗೆ ಹಾಡಿಕೊಂಡರು. ಆದರೆ, ಧೈರ್ಯವಾಗಿ ಮೆಟ್ಟಿ ನಿಂತೆ ಎಂದು ಫಾತಿಮಾ ಹೇಳಿಕೊಂಡಿದ್ದಾರೆ.