
ಕನ್ನಡಿಗಾಸ್ ಯುಏಈ ಮತ್ತು ದುಬೈ ಮಲಬಾರ್ ಕಲಾ ಸಂಸ್ಕರಿಕ ವೇದಿ ನೇತೃತ್ವದಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಸಂತೋಷ್ ಹೆಗ್ಡೆ ಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಇದೇ ಬರುವ ಮಾರ್ಚ್ 25 ರಂದು ಇಂಡಿಯನ್ ಸ್ಕೂಲ್ ಸಮೀಪದಲ್ಲಿರುವ ಇಂಡಿಯಾ ಕ್ಲಬ್ ನಲ್ಲಿ ಸಂಜೆ 6 ಗಂಟೆಗೆ ಸರಿಯಾಗಿ ನಡೆಯಲಿದೆ.
ಈ ಕುರಿತು ದುಬೈ ದೇರಾದ ರಫೀ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತನಾಡಿದ ಕನ್ನಡಿಗಾಸ್ ಯುಏಈ ಯ ನೇತೃತ್ವವನ್ನು ವಹಿಸಿರುವ, ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಕಾರ್ಯಕ್ರಮದ ವಿವರಣೆಯನ್ನು ನೀಡಿದರು.











ಈ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಡಾ | ಬಿ.ಆರ್. ಶೆಟ್ಟಿ ಯವರು ವಹಿಸಲಿರುವರು ಮತ್ತು ಅತಿಥಿಗಳಾಗಿ ಕರ್ನಾಟಕ ಸರಕಾರದ ಅರಣ್ಯ ಸಚಿವ ಬಿ.ರಮಾನಾಥ್ ರೈ ಮತ್ತು ಆರೊಗ್ಯ ಸಚಿವ ಯು.ಟಿ. ಖಾದರ್ , ಮಂಜೇಶ್ವರ ವಿಧಾನಸಭೆ ಸದಸ್ಯ ಅಬ್ದುಲ್ ರಜಾಕ್ ಹಾಗು ಯುಏಈ ಎಕ್ಸ್ಚೇಂಜ್ ಅಧ್ಯಕ್ಷರಾದ ಸುಧೀರ್ ಶೆಟ್ಟಿ ಭಾಗವಹಿಸಲಿರುವರು.
ಜಸ್ಟಿಸ್ ಸಂತೋಷ್ ಹೆಗ್ಡೆ ಯವರೊಂದಿಗೆ ಸಂವಾದ ಕಾರ್ಯಕ್ರಮ ಮತ್ತು ಸಚಿವರುಗಳೊಂದಿಗೆ ಅನಿವಾಸಿಗಳ ಸಮಸ್ಯೆಯ ಬಗ್ಗೆ ಪ್ರಶ್ನೋತ್ತರ ಚರ್ಚೆ ಇದೆ. ಹಾಗಾಗಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕನ್ನಡಿಗರನ್ನು ಆಮಂತ್ರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಎಂ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ದುಬೈ ಮಲಬಾರ್ ಕಲಾ ಸಂಸ್ಕರಿಕ ವೇದಿ ಪದಾಧಿಕಾರಿಗಳಾದ ಯೂಸುಫ್ ಸುಬ್ಬಯ್ಯಕಟ್ಟ , ಕೆ.ಯಮ್. ಅಬ್ಬಾಸ್, ಅಶ್ರಫ್ ಕರಾಲ ಮತ್ತಿತರು ಉಪಸ್ಥಿತರಿದ್ದರು.