
ಮಂಗಳೂರು,ಮಾ.22 : ಮಂಗಳೂರು ಆಕಾಶವಾಣಿಯ ಜೀವನರೇಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತ ಸಂಚಿಕೆಯಲ್ಲಿ ಮಾರ್ಚ್ 24ರಂದು ಬೆಳಿಗ್ಗೆ 10.30 ಗಂಟೆಗೆ ವಕ್ರಪಾದ ಚಿಕಿತ್ಸಾ ಸೇವಾ ಯೋಜನೆ ಕುರಿತಾಗಿ ವಿಶೇಷ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗಲಿದೆ.
ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಿರುವ ವಕ್ರಪಾದ ಚಿಕಿತ್ಸಾ ಸೇವಾ ಯೋಜನೆಗೆ ಸಂಬಂಧಿಸಿದ ಪೂರ್ಣ ವಿವರವನ್ನು ಕ್ಯೂರ್ ಇಂಟರ್‌ನ್ಯಾಶನಲ್‌ನ ರಾಜ್ಯ ಸಂಯೋಜಕರಾದ ಗೋಪಿ ಭೂಷನಾಥನ್, ವೆನ್‌ಲಾಕ್‌ನ ಮೂಳೆತಜ್ಞರಾದ ಡಾ.ಟಿ.ಸುಧಾಕರ್ ಹಾಗೂ ವಕ್ರಪಾದ ಚಿಕಿತ್ಸಾ ಘಟಕದ ಸಂಯೋಜಕಿ ಕೌನ್ಸಿಲರ್ ಪ್ರಿಯಾ ಯೋಗೀಶ್ ಅವರು ನೀಡಲಿದ್ದಾರೆ. ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಇವರು ಸಂದರ್ಶನ ಮಾಡಿದ್ದಾರೆ.

ಕ್ಯೂರ್ ಇಂಟರ್‌ನ್ಯಾಶನಲ್ ಇಂಡಿಯಾದ ಮೂಲಕ ವಕ್ರಪಾದ ಚಿಕಿತ್ಸೆಗೆ ಉಚಿತವಾಗಿ sನೀಡುವ ಶೂ, ಕೃತಕಕಾಲು ಮತ್ತಿತರ ಸೌಲಭ್ಯ ಹಾಗೂ ವೆನ್ಲಾಕ್‌ನಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ನೀಡಲಾಗುವುದು.