ದೆಹಲಿ: ಜೆಎನ್ ಯು ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಹೋಲಿಕೆ ಮಾಡಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.
ದೇಶ ವಿರೋಧಿ ಘೋಷಣೆ ಕೂಗಿದ ವ್ಯಕ್ತಿಯನ್ನು ಯಾವತ್ತೂ ಒಬ್ಬ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನಿಗೆ ಹೋಲಿಕೆ ಮಾಡಬಾರದು ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಅವರು ಹೇಳಿದ್ದಾರೆ.
ದೇಶದ ವಿರುದ್ಧ ಘೋಷಣೆ ಕೂಗುವವರನ್ನು ಭಗತ್ ಸಿಂಗ್ ಹೋಲಿಕೆ ಮಾಡಬೇಡಿ ಎಂದು ನಾನು ಶಶಿ ತರೂರ್ ಅವರಲ್ಲಿ ಕೇಳಿಕೊಳ್ಳುತ್ತೇನೆ ಮತ್ತು ಅವರಿಗೆ ಅಗೌರವ ತೋರಬೇಡಿ ಮತ್ತು ಈ ಕೂಡಲೇ ದೇಶದ ಕ್ಷಮೆ ಕೇಳಬೇಕು ಎಂದು ಈ ಮೂಲಕ ಮನವಿ ಮಾಡಿದ್ದಾರೆ.
ಜೆಎನ್ ಯುನಲ್ಲಿ ಆಯೋಜಿಸಿದ್ದ ಜೆಎನ್ ಯು ಹಾಗೂ ರಾಷ್ಟ್ರೀಯತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಶಶಿತರೂರ್ ಅವರು, ಕನ್ಹಯ್ಯ ಕುಮಾರ್ ಅವರನ್ನು ಭಗತ್ ಸಿಂಗ್ ಗೆ ಹೋಲಿಕೆ ಮಾಡಿದ್ದರು.