ಮಂಗಳೂರು / ಸುರತ್ಕಲ್, ಮಾ.19: ಗ್ಯಾಸ್ ತುಂಬಿದ್ದ ಟ್ಯಾಂಕರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಇಂದು ಮುಂಜಾನೆ ಸುರತ್ಕಲ್ ಸಮೀಪದ ಬಿಎ ಎಸ್ ಎಪ್ ಬಳಿ ನಡೆದಿದ್ದು, ಈ ಸಂದರ್ಭ ಟ್ಯಾಂಕರ್ನಲ್ಲಿದ್ದ ಗ್ಯಾಸ್ ಸೋರಿಕೆಯಾಗದೇ ಇದ್ದುದ್ದರಿಂದ ಬಹುದೊಡ್ಡ ಅನಾಹುತವೊಂದು ತಪ್ಪಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಗಾಯ ಗೊಂಡವರನ್ನು ಸಮೀಪದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ,
ಶನಿವಾರ ಮುಂಜಾನೆ ಸುಮಾರು 5.30 ರ ಸಂದರ್ಭ ಎಚ್ ಪಿ ಸಿ ಎಲ್ ನಿಂದ ಗ್ಯಾಸ್ ತುಂಬಿಸಿಕೊಂಡು ಹೊರಟ ಟ್ಯಾಂಕರ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಟ್ಯಾಂಕರ್ ಪಲ್ಟಿ ಹೊಡೆದ ರಸ್ತೆ ಪಕ್ಕದಲ್ಲೇ ಪೆಟ್ರೋಲ್ ಪಂಪ್ ಇದ್ದು, ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾಗಿದ್ದಲ್ಲಿ ದೊಡ್ದ ಅನಾಹುತ ನಡೆಯುವ ಸಾದ್ಯತೆ ಇತ್ತು,
ಸ್ಥಳಕ್ಕೆ ಅಗ್ನಿಶಾಮಕ ದಳ, ಸುರತ್ಕಲ್ ಪೋಲಿಸರು ಮತ್ತು ಸಂಚಾರಿ ಠಾಣಾ ಪೋಲಿಸರು ಬೇಟಿ ನೀಡಿದ್ದು ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.