ರಾಷ್ಟ್ರೀಯ

ರೂ.17ಲಕ್ಷ ಸುಲಿಗೆ ಮಾವೊವಾದಿಗಳ ಬಂಧನ

Pinterest LinkedIn Tumblr

terrer2ರಾಂಚಿ,ಮಾ.18- ಅಪರಿಚಿತ ಉದ್ಯಮಿಗಳಿಂದ ಕಾರಿನಲ್ಲಿ ಬಂದ ಇಬ್ಬರು ಮಾವೋವಾದಿಗಳು 17 ಲಕ್ಷ ರೂ. ಸುಲಿಗೆ ಮಾಡಿ ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಮುಖ್ಯಮಂತ್ರಿ ರಘುಬರ ದಾಸ್ ಅವರ ಗೃಹ ಕಚೇರಿ ಸಮೀಪ ನಡೆದಿದೆ.

ಇಬ್ಬರನ್ನು ಬಂಧಿಸಿರುವ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ಅದರಲ್ಲಿದ್ದ ಪ್ರಸಿದ್ಧ ಮಾಲ್‍ನಲ್ಲಿ ಖರೀದಿಸಲಾಗಿದ್ದ ಹೊಸ ಬಟ್ಟೆಗಳು, ಶೂ, ಐದು ಕೆಜಿ ಆಹಾರ, ತಿಂಡಿ ತಿನಿಸುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದೇವೇಂದ್ರ ಕುಜುರ್(32) ಮತ್ತು ಭವಾನಿ ಓರಾನ್(25) ಬಂಧಿತ ಮಾವೋವಾದಿಗಳಾಗಿದ್ದಾರೆ. ಬಿಹಾರ ಜಾರ್ಖಂಡ್ ಉತ್ತರ ಛತ್ತೀಸಗಡದಲ್ಲಿ ವಿಶೇಷ ಸಮಿತಿಯ ವಿನಯ್ ಅಲಿಯಾಸ್ ಬಡ ವಿಕಾಸ್ ಅಲಿಯಾಸ್ ಬಲ್ಕೇಶ್ವರ್ ಓರಾನ್‍ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿನಯ್ ಮೋಸ್ಟ್ ವಾಟೆಂಡ್ ನಕ್ಸಲನಾಗಿದ್ದಾನೆ.

ಕಳೆದ ಎರಡು ವರ್ಷಗಳಿಂದ ಉದ್ಯಮಿಗಳಿಂದ ಸುಲಿಗೆ ಮಾಡುತ್ತಿದ್ದ, ಬಂಧಿತರ ಹಿನ್ನೆಲೆ ಕುರಿತು ತನಿಖೆ ನಡೆಸಲಾಗುತ್ತಿದೆ. ಬಂಧಿತರು ಮಾವೋವಾದಿಗಳಾಗಿದ್ದಾರೆ. ಮಾವೋವಾದಿಗಳ ಪರ ಅನುಕಂಪವುಳ್ಳವರಲ್ಲ ಎಂಬುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡಿರುವ ಕಾರು ರಾಂಚಿಯಲ್ಲಿ ನೋಂದಣಿ ಮಾಡಿಸಿರುವುದಾಗಿದೆ.

ಮಾವೋವಾದಿಗಳಿಗೆ ಹಣ ಕಟ್ಟು ನೀಡಿದ ವ್ಯಕ್ತಿ ಬಂಧಿತರಿಗೆ ಅಪರಿಚಿತನಾಗಿದ್ದಾನೆ. ಬಡ ವಿಕಾಸ್ ಹೇಳಿದಂತೆ ರಾಕ್ ಗಾರ್ಡನ್ ಬಳಿ ತೆರಳಿ ಹಣವನ್ನು ಪಡೆದುಕೊಂಡೆವು. ಇದು ಬಡ ವಿಕಾಸ್ ಅವರ ಯೋಜನೆ. ಹಣ ನೀಡಿದ ವ್ಯಕ್ತಿ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

ಅನಾರೋಗ್ಯ ಪೀಡಿತರಾಗಿರುವ ಮಾವೋ ಮುಖಂಡರಿಗೆ ನೀಡಲು ಹಣ್ಣು ಹಂಪಲು ಕೊಂಡೊಯ್ಯುತ್ತಿದ್ದುದಾಗಿ ಹೇಳಿದ್ದಾರೆ. ರಾತು ರಸ್ತೆಯಿಂದ ರಾಜಧಾನಿಗೆ ಪ್ರವೇಶ ಮಾಡಿದ್ದು, ಶಾಪಿಂಗ್ ನಡೆಸಿ, ತದನಂತರ ಅವರಿಗಾಗಿ ಕಾಯುತ್ತಿದ್ದ ವ್ಯಕ್ತಿ ಬಳಿ ತೆರಳಿ ಹಣ ಪಡೆದು ತೆರಳುವಾಗ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಮಾವೋ ಉಗ್ರರಿಗಾಗಿ ಕಾಯುತ್ತಿದ್ದ. ವ್ಯಕ್ತಿ ಬಳಿ ಬರುತ್ತಿದ್ದಂತೆ ಕಾರು ನಿಧಾನಗತಿಯಲ್ಲಿ ತೆರಳಿ, ನಂತರ ಹಣ ಪಡೆದು ವೇಗವಾಗಿ ಚಲಿಸಿತು. ಇದರ ಹಿಂದೆಯೇ ಮತ್ತೊಂದು ಕಾರು ಚಲಿಸಲು ಆರಂಭಿಸಿತು. ಇದನ್ನು ಗಮನಿಸಿ, ಅನುಮಾನ ಬಂದು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Write A Comment