
ಅಕಿರ ಹಾಡುಗಳು ಭರ್ಜರಿಯಾಗಿ ಸದ್ದು ಮಾಡಿವೆ ರಿಕ್ಕಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದ ಬಸವೇಶ್ವರನಗರದ ಅಂಬೇಡ್ಕರ್ ಮೈದಾನದಲ್ಲಿ ಕಳೆದ ಶುಕ್ರವಾರ ಅಕಿರ ಹಾಡುಗಳನ್ನು ಅದ್ದೂರಿಯಾಗಿ ಅಕರ್ಷಕ ವೇದಿಕೆಯಲ್ಲಿ ಕಿವಿಗಡಚಿಕ್ಕುವ ಅಬ್ಬರದಲ್ಲಿ ಬಿಡುಗಡೆ ಮಾಡಲಾಗಿದೆ.
ಅಕಿರ ಹಾಡುಗಳನ್ನು ಕೇಳಿದ ಸಂಗೀತ ಪ್ರೀಯರು ಬೇಷ್ ಎಂದಿದ್ದಾರೆ, ಅಂಬೇಡ್ಕರ್ ಮೈದಾನವು ಅಕಿರ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ತುಂಬಿತುಳಿಕಿತ್ತು ಬಂದ ಜನರನ್ನು ವೇದಿಕೆಯತ್ತ ನುಗ್ಗದಂತೆ ತಡೆಯುವುದಕ್ಕೆ ಬೌನ್ಸರ್‌ಗಳು ಸುಸ್ತಾಗಿ ಹೋಗಿದ್ದರು.
ಅಂದಹಾಗೆ ’ಅಕಿರ ಧ್ವನಿಸಾಂದ್ರಿಕೆಯನ್ನು ಲೋಕಾರ್ಪಣೆ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್. ಶಶಾಂಕ್‌ಶೇಷಗಿರಿ, ಸಂತೋಷ್‌ವೆಂಕಿರವರು ಯಶ್, ದರ್ಶನ್ ಚಿತ್ರಗಳನ್ನು ಗೀತೆಗಳನ್ನು ಹಾಡಿದರು. ಹರ್ಷಿಕಾಪೂರ್ಣಚ್ಚಾ, ಸಿಂಧೂಲೋಕನಾಥ್, ಶ್ವೇತಾಪಂಡಿತ್ ಹಾಡುಗಳಿಗೆ ನೃತ್ಯ ಮಾಡಿ ರಂಜಿಸಿದರು.
ನಟ ನಿರೂಪ್‌ಭಂಡಾರಿ, ನಿರ್ದೇಶಕ ಅನೂಪ್‌ಭಂಡಾರಿ, ಮೇಘನಾಗಾಂವ್ಕರ್, ನಿರ್ದೇಶಕ ಸುನಿ, ಚೇತನ್‌ಕುಮಾರ್, ಗಣಪ ಚಿತ್ರದ ನಾಯಕಿ ಪ್ರಿಯಾಂಕ, ವಿಜಯ್‌ರಾಘವೇಂದ್ರ ಎಲ್ಲರು ಪರದೆ ಮೇಲೆ ಬಿತ್ತರಿಸುವ ಹಾಡನ್ನು ಬಿಡುಗಡೆ ಮಾಢಿ ಶುಭಹಾರೈಸಿದರು.
ರಾತ್ರಿ ೧೦ಘಂಟೆ ಸಮೀಪಿಸುತ್ತಿರುವಾಗ ಕಾರ್ಯಕ್ರಮಕ್ಕೆ ಯಶ್ ಆಗಮನದಿಂದ ಕಳೆ ಬಂತು. ನಾಯಕ ಅನೀಶ್ ಕನ್ನಡದ ಆಡಿಯೋ ಅನಾವರಣ ಇಷ್ಟು ದೊಡ್ಡ ಮಟ್ಟದಲ್ಲಿ ನಡೆದಿರುವುದು ಸಂತಸ ತಂದಿದೆ. ಇನ್ನು ಮುಂದೆ ತಲುಗು,ತಮಿಳು,ಹಿಂದಿ ಪೋಸರ್‌ಗಳು ಕಾಣಿಸುವುದಿಲ್ಲ. ಎಲ್ಲಾ ಕನ್ನಡದ ಚಿತ್ರಗಳು ರಾರಾಜಿಸುತ್ತವೆ ಎಂದರೆ,ನಾಯಕಿಯರಾದ ಅದಿತಿರಾವ್, ಕೃಷಿತಾಪಂಡ ಮತ್ತು ಸಂಗೀತ ನಿರ್ದೇಶಕ ಅಜನೀಶ್‌ಲೋಕನಾಥ್ ಅಬ್ಬರದ ಶಬ್ದದಲ್ಲಿ ಅಕಿರ ಅತ್ಯುತ್ತಮ ಸಿನಿಮಾ ಹಾಡುಗಳು ಚಿತ್ರದ ಕತೆ ವಿಭಿನ್ನವಾಗಿದೆ ಎನ್ನುತ್ತಾರೆ.
ಎಲ್ಲರ ನಂತರ ಮೈಕ್ ಯಶ್ ಕೈಗೆ ಹೋದಾಗ ಶಿಳ್ಳೆ, ಕರಾತಡನ ಕೇಳಿಬಂತು. ಇಷ್ಟು ಜನ ಸೇರಿದ್ದಕ್ಕೆ ನನ್ನ ಕಡೆಯಿಂದ ನಿಮಗೊಂದು ಚಪ್ಪಾಳೆ. ಚಿತ್ರರಂಗಕ್ಕೆ ಹಲವರು ಕಲಾಕಾರರಾಗಿ ಬರುತ್ತಾರೆ.
ಆದರೆ ಆಯ್ಕೆಯಾಗುವುದು ಕೆಲವರು ಮಾತ್ರ. ಅಪ ಸ್ನೇಹಿತ ಅನೀಶ್ ಸಿನಿಮಾಕ್ಕೆ ಪ್ರೋತ್ಸಾಹಿಸಲು ಇಲ್ಲಿಗೆ ಬಂದಿರುವೆ. ಇಷ್ಟು ದಿನ ನನ್ನನ್ನು ಬೆಳಿಸಿದಂತೆ ಇವರನ್ನು ಹಾರೈಸಿ. ಇಲ್ಲಿ ನಿಲ್ಲಬೇಕಾದರೆ ಶ್ರದ್ದೆ, ನಿಯತ್ತು, ಪ್ರೀತಿ, ಸಮರ್ಪಣೆ, ಸರಳತನ, ಚಲ, ಸಾಧನೆ ಮಾಡುವ ಹುಮ್ಮಸ್ಸು ಇದ್ದರೆ ಗೆದ್ದೆ ಗೆಲ್ತಾರೆ. ಇವೆಲ್ಲಾ ಗುಣಗಳು ಅನೀಶ್‌ರಲ್ಲಿ ಇದೆ. ಮುಂದೆ ಇವರು ಸ್ಟಾರ್ ಆಗುವುದು ಖಚಿತ ಸಂದೇಹ ಬೇಡ ಎಂದು ಹೊಗಳಿದರು.
ಪ್ರತಿಭೆ, ಯೋಗ್ಯತೆ ಇರುವವರಿಗೆ ಯೋಗ ಅನಾಯಾಸವಾಗಿ ಬರುತ್ತದೆ. ಹಂಸಲೇಖಾರವರ ದೀಪದಿಂದ ದೀಪ ಹಚ್ಚ ಬೇಕು ಮಾನವ ಎನ್ನುವ ಹಾಗೆ ನಾವೆಲ್ಲರೂ ಎಲ್ಲರಿಗೂ ಅವಕಾಶ ಮಾಢಿಕೊಡಬೇಕು.
ಅಮ್ಮ ಮುದ್ದಿನಿಂದ ಕೆಂಚಾ ಅಂತ ಕರೆಯುತ್ತಾರೆ ಎಂದಾಗ, ಅಭಿಮಾನಿಗಳ ಅಬ್ಬರ ವರಾತದ ಮೇರೆಗೆ ಮಾಸ್ಟರ್‌ಪೀಸ್, ಮಿ.ರಾಮಚಾರಿ ಚಿತ್ರದ ಡೈಲಾಗ್ ಹೇಳಿದಾಗ ಎಲ್ಲರು ಹುಚ್ಚೆದ್ದು ಕುಣಿದರು. ನವೀನ್‌ರೆಡ್ಡಿ ನಿರ್ದೇಶನ, ಚೇತನ್,ಎಸ್.ಎಸ್.ರೆಡ್ಡಿ, ಶ್ರೀಕಾಂತ್ ಪ್ರಸನ್ನ ನಿರ್ಮಾಣದ ಚಿತ್ರವು ಸದ್ಯದಲ್ಲೆ ತೆರೆ ಮೇಲೆ ಬರಲಿದೆ.