ಕನ್ನಡ ವಾರ್ತೆಗಳು

ಮಾ.17 : ಜತ್ತಪ್ಪ ರೈ ಜೀವನಗಾಥೆ ಗ್ರಂಥ ಲೋಕಾರ್ಪಣೆ

Pinterest LinkedIn Tumblr

univercity_press_meet_1

ಮಂಗಳೂರು,ಮಾ.15: ಮಾ.17 ರಂದು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ “ಗಾಂಧಿ ವಿಚಾರಧಾರೆ ಸಾರ್ವಕಾಲಿಕ ರಾಜಕೀಯ ಒಂದು ಪವಿತ್ರ ಸೇವೆ ಎಂಬ ಬಗ್ಗೆ ಒಂದು ದಿನದ ವಿಚಾರಸಂಕಿರಣ ಹಾಗೂ ಗಾಂಧಿ ಹೆಜ್ಜೆಯ ಜಾಡಿನಲ್ಲಿ ಜತ್ತಪ್ಪ ರೈ ಜೀವನಗಾಥೆಯ ಗ್ರಂಥವನ್ನು ಲೋಕಾರ್ಪಣೆಯಾಗಲಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ಉದಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

univercity_press_meet_2

univercity_press_meet_3

ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಗಾಂಧಿ ಸ್ಮಾರಕ ನಿಧಿ, ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರ ಉಡುಪಿ , ಕುಂಬ್ರ ಜತ್ತಪ್ಪರೈ ಪ್ರತಿಷ್ಠಾನ ಕಜೇಮಾರು ಪುತ್ತೂರು,ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿ ಹಾಗೂ ಚಕ್ರವರ್ತಿ ರಾಜಗೋಪಾಲಾಚಾರಿಯವರ ಮೊಮ್ಮಗ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾದ ಗೋಪಾಲಕೃಷ್ಣ ಗಾಂಧಿ ಉದ್ಘಾಟಿಸಲಿದ್ದಾರೆ ಹಾಗೂ “ಗಾಂಧಿ ಹೆಜ್ಜೆಯ ಜಾಡಿನಲ್ಲಿ ಜತ್ತಪ್ಪರೈ ಜೀವನಗಾಥೆ” ಗ್ರಂಥವನ್ನು ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ಸಂತೋಷ್ ಹೆಗ್ಡೆ ಬಿಡುಗಡೆಗೊಳಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕುಂಬ್ರ ಜತ್ತಪ್ಪರೈ ಪ್ರತಿಷ್ಠಾನ ಕಜೆಮಾರು ಇದರ ಅಧ್ಯಕ್ಷ ಇಳಂತಾಜೆ ಪ್ರಮೋದ್ ಕುಮಾರ್ ರೈ, ಗಾಂಧಿ ಹೆಜ್ಜೆಯ ಜಾಡಿನಲ್ಲಿ ಜತ್ತಪ್ಪರೈ ಜೀವನಗಾಥೆ ಗ್ರಂಥದ ಸಂಪಾದಕ ಏರಿಯಾ ಲಕ್ಷ್ಮೀನಾರಾಯಣ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Write A Comment