ರಾಷ್ಟ್ರೀಯ

ಆರ್ ಎಸ್ ಎಸ್ ಚಡ್ಡಿ ಬದಲಾಗಲು ನನ್ನ ಹೆಂಡತಿ ಕಾರಣ…ಅಗತ್ಯ ಬಿದ್ದಲ್ಲಿ ಅವರು ಮತ್ತೆ ಚಡ್ಡಿ ಧರಿಸುವಂತೆ ಮಾಡುತ್ತೇವೆ: ಲಾಲೂ ಪ್ರಸಾದ್ ಯಾದವ್

Pinterest LinkedIn Tumblr

lalu

ಪಾಟ್ನಾ: ಆರ್ ಎಸ್ ಎಸ್ ಸದಸ್ಯರು ಚಡ್ಡಿ ಧರಿಸುವುದನ್ನು ಬದಲಿಸಿ ಪ್ಯಾಂಟ್‌ ಹಾಕಿಕೊಳ್ಳುವ ನಿಯಮ ಜಾರಿಗೆ ತರಲು ನನ್ನ ಪತ್ನಿ ರಾಬ್ಡಿದೇವಿ ಕಾರಣ ಎಂದು ಆರ್‌ಜೆಡಿ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಆರ್ ಎಸ್ ಎಸ್ ಸಂಘಟನೆಯ ಸದಸ್ಯರ ಡ್ರೆಸ್ ಬದಲಿಸುವಂತೆ ರಾಬ್ಡಿದೇವಿ ಒತ್ತಡ ಹೇರಿದ್ದರು. ಮತ್ತೇನಾದರೂ ನಮಗೆ ಅಗತ್ಯ ಬಿದ್ದಲ್ಲಿ ಅವರು ಚಡ್ಡಿ ಧರಿಸುವಂತೆ ಮಾಡುತ್ತೇವೆ ಎಂದು ಲೇವಡಿ ಮಾಡಿದ್ದಾರೆ.

ಕಳೆದ ಎರಡು ತಿಂಗಳುಗಳ ಹಿಂದೆ ಪತ್ನಿ ರಾಬ್ಡಿದೇವಿ, ಆರೆಸ್ಸೆಸ್ ಡ್ರೆಸ್‍‌ಕೋಡ್ ಬಗ್ಗೆ ಹೇಳಿಕೆ ನೀಡಿದ್ದರಿಂದ ಮುಜುಗರಕ್ಕೊಳಗಾಗಿ, ಕೊನೆಗೂ ಮೊದಲಿನ ಡ್ರೆಸ್‌ಗೆ ಗುಡ್‍‌ಬೈ ಹೇಳಿ ಪ್ಯಾಂಟ್ ಧರಿಸುವಂತಾಯಿತು ಎಂದರು.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆರೆಸ್ಸೆಸ್ ಸದಸ್ಯರು ಚಡ್ಡಿ ಹಾಕಿಕೊಂಡು ತಿರುಗಲು ನಾಚಿಕೆಯಾಗುವುದಿಲ್ಲವೇ ಎಂದು ರಾಬ್ಡಿದೇವಿ ಪ್ರಶ್ನಿಸಿದ್ದರು.

Write A Comment