ಅಂತರಾಷ್ಟ್ರೀಯ

ಆಫ್ರಿದಿ ಭಾರತ ಪ್ರೀತಿ: ನಾಚಿಕೆಯಾಗಬೇಕು ಎಂದ ಮಿಯಾಂದಾದ್

Pinterest LinkedIn Tumblr

afridi, miandad

ಕರಾಚಿ: ಪಾಕಿಸ್ತಾನ ಅಭಿಮಾನಿಗಳಿಗಿಂತ ಭಾರತೀಯರೇ ಹೆಚ್ಚು ಪ್ರೀತಿ ನೀಡುತ್ತಾರೆ ಎಂಬ ಶಾಹೀದ್ ಆಫ್ರಿದಿ ಹೇಳಿಕೆಗೆ ಪಾಕ್ ಮಾಜಿ ಕ್ರಿಕೆಟಿಗ ಜಾವಿದ್ ಮಿಯಾಂದಾದ್ ಕಿಡಿಕಾರಿದ್ದಾರೆ.

ಪಾಕಿಸ್ತಾನದವನಾಗಿದ್ದು ಭಾರತ ಕುರಿತಾದ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದು ಕ್ರಿಕೆಟಿಗನಾಗಿ ಶಾಹೀದ್ ಅಫ್ರಿದಿಗೆ ನಾಚಿಕೆಯಾಗಬೇಕು ಎಂದು ಜರಿದಿದ್ದಾರೆ. ಟಿ20 ವಿಶ್ವಕಪ್ ಗಾಗಿ ಭಾರತಕ್ಕೆ ಆಗಮಿಸಿರುವ ಕ್ರಿಕೆಟಿಗ ಶಾಹೀದ್ ಅಫ್ರಿದಿ ಭಾರತದಲ್ಲಿ ಆಡಲು ನಮಗೆ ಯಾವುದೇ ಭಯವಿಲ್ಲ. ಪಾಕಿಸ್ತಾನ ಜನರಿಗಿಂತ ಇಲ್ಲಿನ ಜನ ನಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳಿದ್ದರು. ಇದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗರ ಕಣ್ಣು ಕೆಂಪಾಗಿಸಿದೆ.

ಶಾಹೀದ್ ಅಫ್ರಿದಿ ನಾಯಕತ್ವದಲ್ಲಿ ಪಾಕ್ ತಂಡ ಭಾರತಕ್ಕೆ ಹೋಗಿರುವುದು ಟಿ20 ವಿಶ್ವಕಪ್ ಆಡಲು ಅದನ್ನು ಬಿಟ್ಟು ಆ ದೇಶವನ್ನು ಹೊಗಳುವುದಕ್ಕಲ್ಲ ಎಂದು ಮಿಯಾಂದಾದ್ ಕಿಡಿಕಾರಿದ್ದಾರೆ.

Write A Comment