ರಾಷ್ಟ್ರೀಯ

ರಾಹುಲ್ ಗೆ ಮಕ್ಕಳಿದಿದ್ದರೆ ದೇಶದ್ರೋಹ ಗುಂಪಿಗೆ ಸೇರುತ್ತಿದ್ದರು: ಬಿಜೆಪಿ ಮುಖಂಡ ಓಂ ಮಾಥುರ್ ವಿವಾದಾತ್ಮಕ ಹೇಳಿಕೆ

Pinterest LinkedIn Tumblr

rahul-gandhi4

ಸೂರತ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮದುವೆಯಾಗಿ ಮಕ್ಕಳಾಗಿದ್ದರೆ, ಆ ಮಕ್ಕಳು ದೇಶದ್ರೋಹಿಗಳ ಗುಂಪಿಗೆ ಸೇರುತ್ತಿದ್ದರು ಎಂದು ಬಿಜೆಪಿಯ ನಾಯಕ ಓಂ ಮಾಥುರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸೂರತ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ ರಾಹುಲ್ ಗಾಂಧಿ ಮದುವೆಯಾಗಿಲ್ಲ, ಇಲ್ಲದಿದ್ದರೆ, ಮದುವೆಯಾಗಿ ಮಕ್ಕಳಿದಿದ್ದರೇ, ಅವರು ದೇಶದ್ರೋಹ ಗುಂಪಿಗೆ ಸೇರುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ನಾಲ್ಕು ತಲೆಮಾರುಗಳಿಂದ ಒಂದೇ ಕುಟುಂಬ ದೇಶವನ್ನು ಆಳಿದೆ. ಕಾಂಗ್ರೆಸ್ ನವರಿಗೆ ಒಂದೇ ಕುಟುಂಬದ ಆಳ್ವಿಕೆಯಲ್ಲಿಯೇ ಹೆಚ್ಚು ವಿಶ್ವಾಸ ಎಂದ ಅವರು, ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡು ನಿರಾಶೆಯಲ್ಲಿದೆ. ಹಾಗಾಗಿ, ಇಲ್ಲಸಲ್ಲದ ವಿಷಯಗಳ ಬಗ್ಗೆ ಕ್ಯಾತೆ ತೆಗೆಯುತ್ತಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರ ವಿರೋಧಿ ಅಂಶಗಳನ್ನು ಬೆಂಬಲಿಸಿ ಅಂದು ರಾಹುಲ್ ಗಾಂಧಿ ಜೆಎನ್ ಯುಗೆ ತೆರಳಿದ್ದರು. ಹಾಗಾಗಿ, ಮೊದಲು ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಮಾಥುರ್ ಒತ್ತಾಯಿಸಿದ್ದಾರೆ. ಮಾಥುರ್ ಹೇಳಿಕೆಯನ್ನು ಖಂಡಿಸಿರುವ ಗುಜರಾತ್ ಕಾಂಗ್ರೆಸ್ ಮುಖಂಡ ಜಯರಾಜ್ ಸಿನ್ಹಾ, ಮಾಥುರ್ ಹೇಳಿಕೆ ಕೀಳು ಮಟ್ಟದಾಗಿದೆ ಎಂದು ಕಿಡಿ ಕಾರಿದ್ದಾರೆ.

Write A Comment