ಮ೦ಗಳೂರು ಮಾರ್ಚ್.10: ಅಧಿಕೃತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಸೊತ್ತುಗಳನ್ನು ಮಂಗಳೂರು ವಲಯ ಅರಣ್ಯಾಧಿಕಾರಿಗಳ ನೇತ್ರತ್ವದ ತಂಡ ಬೋಳಿಯಾರು ಎಂಬಲ್ಲಿ ವಶಪಡಿಸಿಕೊಂಡಿದೆ.
ಮಾ. 9ರಂದು ಮಂಗಳೂರು ತಾಲೂಕು ಬೋಳಿಯಾರು ಗ್ರಾಮದ ಬೋಳಿಯಾರು ಎಂಬಲ್ಲಿ ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ಕಿರಾಲ್ ಬೋಗಿ ಜಾತಿಯ ಮರದ 36 ದಿಮ್ಮಿ ೫.೨೯೬ಘ.ಮೀ ಮೋಪು ಮತ್ತು 30 ಕಂಬಗಳನ್ನು ಕಿರಣ್, ಬಿ.ಸಿ.ರೋಡ್ ಇವರ ಲಾರಿ ನಂಬ್ರ ಕೆಎ-೪೬-೧೪೭ರಲ್ಲಿ ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸೊತ್ತುಗಳನ್ನು ಸರಕಾರ ಪರವಾಗಿ ಅಮಾನತು ಪಡಿಸಿ ಲಾರಿ ಚಾಲಕ ಮಹಮ್ಮದ್ ಶಾಫಿ, ಬಂಟ್ವಾಳ ಇವರನ್ನು ಬಂಧಿಸಿ ಮುಚ್ಚಳಿಕೆ ಪತ್ರದ ಮೂಲಕ ಬಿಡುಗಡೆಗೊಳಿಸಲಾಗಿದೆ.
ಸದ್ರಿ ಕಾರ್ಯಾಚರಣೆಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ, ಮತ್ತು ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಯವರಾದ ಬಿ. ಜಗರಾಜ್, ರವಿ ಕುಮಾರ್ ಅರಣ್ಯ ರಕ್ಷಕರಾದ ಜಿತೇಶ್ ಪಿ. ಸುಕುಮಾರ್, ಅರಣ್ಯ ವೀಕ್ಷಕರಾದ ಪ್ರಿನ್ಸ್ ಹಾಗೂ ಚಾಲಕ ಸೂರಜ್ ಸುವರ್ಣ ಇವರು ಸಹಕರಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ, ಇವರ ನಿರ್ದೇಶನದಂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ನಾಯ್ಕ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು, ಮಂಗಳೂರು ಇವರು ನಡೆಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.