ಕನ್ನಡ ವಾರ್ತೆಗಳು

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ತಂದೆ ಕಲ್ಲಾರೆ ಜಯರಾಮ್ ಶೆಟ್ಟಿ ವಿಧಿವಶ

Pinterest LinkedIn Tumblr

Kallare_jayaram_shetty

ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ತಂದೆ ಕಲ್ಲಾರೆ ಜಯರಾಮ್ ಶೆಟ್ಟಿ (84) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ರತ್ನಕಾಂತಿ, ನಾಲ್ವರು ಗಂಡು ಮಕ್ಕಳನ್ನು ಅಗಲಿದ್ದಾರೆ. ಶ್ರೀಯುತರು ಮೂವತ್ತೈದು ವರ್ಷಗಳ ಕಾಲ ಭಾರತೀಯ ವಾಯು ಸೇನೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

ಕಲ್ಲಾರೆ ಜಯರಾಮ್ ಶೆಟ್ಟಿಯವರ ಪ್ರಥಮ ಪುತ್ರ ಡಾ.ಶಿವಶರಣ್ ಶೆಟ್ಟಿ ಅವರು ‘ನಮ್ಮಟಿವಿ’ ಖಾಸಗಿ ಸುದ್ದಿವಾಹಿನಿಯ ಮಾಲೀಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲದೇ ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಾಹಿಸುತ್ತಿದ್ದಾರೆ. ಗುರುಕಿರಣ್ ಅವರು ಕನ್ನಡ ಹಾಗೂ ಇತರ ಭಾಷೆಗಳ ಖ್ಯಾತ ಸಂಗೀತ ನಿರ್ದೇಶಕರಾಗಿದ್ದಾರೆ, ಡಾ.ದೇವಿಚರಣ್ ಶೆಟ್ಟಿಯವರು ಉದ್ಯಮಿಯಾದರೆ, ಹರಿಚರಣ್ ಶೆಟ್ಟಿ ಶಿಕ್ಷಣ ಸಂಸ್ಥೆಯೊಂದನ್ನು ಮುನ್ನಡೆಸುತ್ತಿದ್ದಾರೆ.

Write A Comment