ರಾಷ್ಟ್ರೀಯ

ರಾಜೀವ್ ಗಾಂಧಿ ಹಂತಕಿಗೆ ಮತ್ತೆ 1 ದಿನದ ಪೆರೋಲ್

Pinterest LinkedIn Tumblr

naliniದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ 6 ಮಂದಿ ಹಂತಕರ ಪೈಕಿ ನಳಿನಿ ಶ್ರೀಹರನ್​ ಗೆ ಇಂದು ಮತ್ತೆ 1 ದಿನದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ತಂದೆಯ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಬಂಧ ನಳಿನಿಗೆ ಇಂದು ಸಂಜೆ 4 ಗಂಟೆಯಿಂದ ನಾಳೆ ಸಂಜೆ 4 ಗಂಟೆಯ ವರೆಗೆ ಚೆನ್ನೈನ ಮದ್ರಾಸ್ ಹೈಕೊರ್ಟ್ ಪೆರೋಲ್ ಮೇಲೆ ಬಿಡುಗಡೆ ಮಾಡಿದೆ.

ನಳಿನಿಯ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ನಾರಾಯಣನ್ ಕಳೆದ ಫೆಬ್ರವರಿ ತಿಂಗಳಲ್ಲಿ ನಿಧನರಾಗಿದ್ದರು. ಈ ವೇಳೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲೆಂದು 12 ಗಂಟೆಯವರೆಗೆ ಪೊಲೀಸ್ ಭದ್ರತೆಯಲ್ಲಿ ವೆಲ್ಲೂರು ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ತಂದೆಯ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ 1 ದಿನದ ಪೆರೋಲ್ ನೀಡಿದೆ.

Write A Comment