ರಾಷ್ಟ್ರೀಯ

ವಿದ್ಯಾರ್ಥಿಗೆ ಮೊಬೈಲ್‌ನಲ್ಲಿ ಉತ್ತರ ಉತ್ತರಗಳನ್ನು ಕಳುಹಿಸುತ್ತಿದ್ದ ಮೂವರು ಶಿಕ್ಷಕರ ಬಂಧನ

Pinterest LinkedIn Tumblr

arreಭುವನೇಶ್ವರ್,ಮಾ.7-ಮೆಟ್ರಿಕ್ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಮೊಬೈಲ್ ಮೂಲಕ ಉತ್ತರಗಳನ್ನು ಕಳುಹಿಸುತ್ತಿದ್ದ ಮುಖ್ಯೋಪಾಧ್ಯಾಯ ಹಾಗೂ  ಇತರ ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಒರಿಸ್ಸಾದ ಗಂಜಾಂ ಜಿಲ್ಲೆಯ ಭಾರತಿ ವಿದ್ಯಾಪೀಠ ಶಾಲೆಯಲ್ಲಿ ಮೆಟ್ರಿಕ್ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭ ಮುಖ್ಯೋಪಾಧ್ಯಾಯ, ಇನ್ನಿಬ್ಬರು ಶಿಕ್ಷಕರು ವಿದ್ಯಾರ್ಥಿಯೊಬ್ಬನಿಗೆ ಮೊಬೈಲ್ ಮೂಲಕ ಉತ್ತರಗಳನ್ನು ಕಳುಹಿಸುತ್ತಿದ್ದರು. ಆಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಬಂಧಿತ ಶಿಕ್ಷಕರನ್ನು ಮುಖ್ಯೋಪಾಧ್ಯಾಯ ರಾಮಚಂದ್ರ ಪೊಲೈ, ಶಿಕ್ಷಕರಾದ ಬನ್ಸಿಧರ ಬಿಸ್ವಾಲ್ ಹಾಗೂ ಪಿ.ನಬಾ ಪಾತ್ರ ಎಂದು ಗುರುತಿಸಲಾಗಿದೆ.

Write A Comment