ಕರ್ನಾಟಕ

ರಾಜ್ಯ,ದೇಶದೆಲ್ಲಡೆ ಶ್ರದ್ಧಾಭಕ್ತಿಯ ಶಿವರಾತ್ರಿ

Pinterest LinkedIn Tumblr

Shivಬೆಂಗಳೂರು/ನವದೆಹಲಿ: ಶಿವರಾತ್ರಿ ನಿಮಿತ್ತ ಕರ್ನಾಟಕ, ಪಂಜಾಬ್, ಚಂಡೀಗಡ್, ಹರಿಯಾಣ, ನವದೆಹಲಿ ಸೇರಿದಂತೆ ದೇಶದ ಹಲವೆಡೆ ಸೋಮವಾರ ಶ್ರದ್ಧೆ, ಭಕ್ತಿ ಹಾಗೂ ಸಡಗರದಿಂದ ಶಿವಲಿಂಗ ಪೂಜೆ ನಡೆಯುತ್ತಿದೆ.

ನೆರೆಯ ರಾಷ್ಟ್ರ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲೂ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ.

ಬೆಂಗಳೂರಿನ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ಬಸವನಗುಡಿಯ ಮಲ್ಲಿಕಾರ್ಜುನ, ಹಲಸೂರಿನ ಸೋಮೆಶ್ವರ, ವಸಂತಪುರದ ಭವಾನಿ ಶಂಕರ ದೇವಾಲಯ ಸೇರಿದಂತೆ ನಗರದ ಹಲವು ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ತೆರಳಿ ಶಿವನ ದರ್ಶನ ಪಡೆಯುತ್ತಿದ್ದಾರೆ.

ಪ್ರಸಿದ್ಧ ಯಾತ್ರಾ ಸ್ಥಳವಾದ ನಂಜನಗೂಡಿನ ನಂಜುಂಡೇಶ್ವರ, ಚಾಮರಾಜನಗರ ಬಳಿಯ ಮಲೆಯ ಮಹದೇಶ್ವರ ದೇವಾಲಯಗಳಲ್ಲೂ ಇಂದು ವಿಶೇಷವಾದ ಪೂಜೆ ನಡೆಯುತ್ತಿದೆ. ಸಾವಿರಾರು ಭಕ್ತರು ಆಗಮಿಸಿ ಶಿವನ ದರ್ಶನ ಪಡೆಯುತ್ತಿದ್ದಾರೆ.

ಗದಗ/ಉತ್ತರಕನ್ನಡ ವರದಿ: ಶಿವನ ಆರಾಧನೆ ನಿಮಿತ್ತ ಗದಗದ ತ್ರೀಕೂಟೇಶ್ವರ ದೇವಸ್ಥಾನ, ಉತ್ತರ ಕನ್ನಡದ ಶಿರಸಿಯ ಸಹಸ್ರಲಿಂಗ ಹಾಗೂ ಬನವಾಸಿಗೆ ‌ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ.

ನವದೆಹಲಿ: ಶಿವರಾತ್ರಿ ನಿಮಿತ್ತ ದ್ವಾದಶಿ ಲಿಂಗಗಳಿರುವ ಪುಣ್ಯಸ್ಥಳಗಳಲ್ಲಿ ಸಂಭ್ರಮ ಮನೆ ಮಾಡಿದೆ.

ನದಿ, ಸರೋವರಗಳಲ್ಲಿ ಮಿಂದೆದ್ದು, ಸಹಸ್ರ ಸಂಖ್ಯೆಯ ಭಕ್ತಾದಿಗಳು ದೇವಸ್ಥಾನಗಳಲ್ಲಿ ‌ವಿಶೇಷ ಪೂಜೆಗಳನ್ನು ಮಾಡಿಸುತ್ತಿರುವ ನೋಟ ಸಾಮಾನ್ಯ ಎನಿಸಿದೆ.

Write A Comment