ರಾಷ್ಟ್ರೀಯ

ದೇಶದಲ್ಲಿ ಬಡತನ ಬಿತ್ತಿದ್ದು ಕಾಂಗ್ರೆಸ್: ಲೋಕಸಭೆಯಲ್ಲಿ ಪ್ರಧಾನಿ ಮೋದಿ ತಿರುಗೇಟು

Pinterest LinkedIn Tumblr

mo

ನವದೆಹಲಿ: ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಲೋಕಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆರೋಪ, ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಸರ್ಕಾರದ ಯೋಜನೆಗಳನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ, ಕಾಂಗ್ರೆಸ್ ನ ಮಾಜಿ ಪ್ರಧಾನಿಗಳ ಹೇಳಿಕೆಗಳನ್ನೇ ಉದಾಹರಣೆ ನೀಡಿ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಮಾನ ಹರಾಜು ಹಾಕುವ ರೀತಿಯಲ್ಲಿ ಸರ್ಕಾರದ ಯೋಜನೆಗಳನ್ನು ಪ್ರತಿಪಕ್ಷಗಳು ಅಪಹಾಸ್ಯ ಮಾಡಬಾರದು, ಇದರಿಂದ ದೇಶ ದುರ್ಬಲ ಸ್ಥಿತಿಯಲ್ಲಿದೆ ಎಂಬ ಸಂದೇಶ ರವಾನೆಯಾಗುತ್ತದೆ ಎಂದಿದ್ದರು ಎಂದು ಹೇಳಿದ್ದಾರೆ.

ಒಂದು ವೇಳೆ ಸರ್ಕಾರದ ಯೋಜನೆಗಳಲ್ಲಿ ಲೋಪಗಳಿದ್ದರೆ ಅದನ್ನು ಒಟ್ಟಿಗೆ ಕುಳಿತು ಸಮಾಲೋಚನೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಪ್ರತಿಪಕ್ಷಗಳಿಗೆ ಮೋದಿ ಸಲಹೆ ನೀಡಿದ್ದಾರೆ. ಇದೇ ವೇಳೆ ಸಂಸತ್ ಅಧಿವೇಶನಕ್ಕೆ ಗದ್ದಲಗಳ ಮೂಲಕ ಅಡ್ಡಿ ಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧವೂ ಪರೋಕ್ಷವಾಗಿ ಹರಿಹಾಯ್ದಿರುವ ಪ್ರಧಾನಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಗಳನ್ನೇ ಉಲ್ಲೇಖಿಸಿ ” ಸಂಸತ್ ನಲ್ಲಿ ನಡೆಯುವ ಚರ್ಚೆಗಳಿಗೆ ಅಡ್ಡಿ ಉಂಟು ಮಾಡಿದರೆ ಯಾರಿಗೂ ಲಾಭವಾಗುವುದಿಲ್ಲ, ಪ್ರತಿಪಕ್ಷಗಳಿಗೂ ಸೇರಿ ದೇಶದ ಜನತೆಗೆ ನಷ್ಟ ಉಂಟಾಗಲಿದೆ, ಇದು ನರೇಂದ್ರ ಮೋದಿ ಅವರ ಉಪದೇಶ ಅಲ್ಲ, ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಂಸತ್ ನಲ್ಲಿ ನೀಡಿದ್ದ ಹೇಳಿಕೆ” ಎಂದು ಹೇಳಿದ್ದಾರೆ.

ಕಳೆದ 60 ವರ್ಷಗಳಲ್ಲಿ ಬಡವರಿಗಾಗಿ ಕಾಂಗ್ರೆಸ್ ನವರು ಏನನ್ನಾದರೂ ಮಾಡಿದ್ದರೆ ಅದನ್ನು ಯಾರೂ ನಿರಾಕರಿಸುವುದಿಲ್ಲ, ಹಾಗೆಯೇ ಕಾಂಗ್ರೆಸ್ ನವರು ಬಡವರಿಗೆ ಉಪಯುಕ್ತವಾದದ್ದನ್ನು ಮಾಡಿದ್ದರೆ ಇಂದು ಬಡವರು ಸಂಕಷ್ಟ ಎದುರಿಸುತ್ತಿರಲಿಲ್ಲ, ನಾವು 60 ವರ್ಷಗಳ ಕಾಂಗ್ರೆಸ್ ದುರಾಡಳಿತವನ್ನು ಸರಿ ದಾರಿಗೆ ತರುವ ಕೆಲಸ ಮಾಡುತ್ತಿದ್ದೇವೆ, ದೇಶದಲ್ಲಿ ಬಡತನದ ಬಿತ್ತಿದ್ದು ಕಾಂಗ್ರೆಸ್, ಅವರ 60 ವರ್ಷಗಳ ದುರಾಡಳಿತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.

Write A Comment