
ಹೈದರಾಬಾದ್: ಕಳೆದ ವರ್ಷ ವಿಶ್ವದಲ್ಲೇ ಬಾರಿ ಸದ್ದು ಮಾಡಿದ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಭಾಗ -2 2017ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.
ಸಿನಿಮಾ ಮಾರುಕಟ್ಟೆಯ ವಿಶ್ಲೇಷಕ ತರಣ್ ಅದರ್ಶ್ ಟ್ಟಿಟ್ಟರ್ನಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದು, ಈಗಾಗಲೇ ಬಾಹುಬಲಿ ಟಿಟ್ಟರ್ನಲ್ಲಿ ಟಾಪ್ ಟ್ರೆಂಡಿಂಗ್ ಟಾಪಿಕ್ ಆಗಿದೆ.
ಬಾಹುಬಲಿ ಭಾಗ – 12015ರ ಜುಲೈ 10ರಂದು ಬಿಡುಗಡೆಯಾಗಿತ್ತು. 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 600 ಕೋಟಿ ರೂ. ಗಳಿಸಿತ್ತು. ಈ ಮೂಲಕ ಬಾಲಿವುಡ್ ಹೊರತುಪಡಿಸಿ ಭಾರತದಲ್ಲೇ ಅತಿ ಹೆಚ್ಚು ಹಣ ಸಂಗ್ರಹಿಸಿದ ದಾಖಲೆಯನ್ನು ಬಾಹುಬಲಿ ಬರೆದಿತ್ತು.