ಕರ್ನಾಟಕ

ಕೊಲೆ ಕೇಸ್‍ನಲ್ಲಿ ಮೈಸೂರು ನಗರಪಾಲಿಕೆ ಸದಸ್ಯನಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

mem

ಮೈಸೂರು: ಜಿಲ್ಲೆಯ ಜನರನ್ನೇ ಬೆಚ್ಚಿಬಿಳಿಸಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಮೈಸೂರು ನಗರಪಾಲಿಕೆ ಸದಸ್ಯ ಮಾದೇಶ್ ಸೇರಿ 10 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಜಿಲ್ಲಾ 2ನೇ ಹೆಚ್ಚುವರಿ ಕೋರ್ಟ್ ತೀರ್ಪು ನೀಡಿದೆ.

2008ರ ಮೇ 15 ರಂದು ಹುಣಸೂರು ಬೈಪಾಸ್ ಬಳಿಯ ಫಾರ್ಮ್‍ಹೌಸ್‍ನಲ್ಲಿ ಜೋಡಿ ಕೊಲೆ ನಡೆದಿತ್ತು. ಇದರ ವಿಚಾರಣೆ ನಡೆಸಿದ ªಕೋರ್ಟ್ ಪ್ರಮುಖ ಆರೋಪಿ ನಗರ ಪಾಲಿಕೆ ಸದಸ್ಯ ಮಾದೇಶ್ ಜೀವಾವಧಿ ಜೊತೆ 3 ಲಕ್ಷ ರೂ. ದಂಡ ಹಾಗೂ ಪಾಲಿಕೆ ಸದಸ್ಯನ ಸಹೋದರ ಮಂಜುನಾಥ್ ಸೇರಿ 9 ಮಂದಿಗೆ ಜೀವಾವಧಿ ಜೊತೆಗೆ 1 ಲಕ್ಷ ರೂ. ದಂಡ ವಿಧಿಸಿದೆ.

ಈ ವೇಳೆ ಕೋರ್ಟ್ ಎದುರು ಮಾದೇಶ್ ಅಭಿಮಾನಿಗಳು ಹಾಗೂ ಜೆಡಿಎಸ್ ಪ್ರಮುಖ ನಾಯಕರ ಆಗಮಿಸಿದ್ದರು. ಸ್ಥಳಕ್ಕೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಭೇಟಿ ನೀಡಿ, ನ್ಯಾಯಾಲಯದ ಸುತ್ತಮುತ್ತ ಪೆÇಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

2008ರ ಮೇ 15 ರಂದು ನಡೆದಿದ್ದ ಕೊಲೆ ಪ್ರಕರಣದಲ್ಲಿ ರಾಜೇಶ್ ಹಾಗೂ ರಾಮು ಎಂಬುವರ ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ಈ ಘಟನೆಯಲ್ಲಿ ಸುನೀಲ್ ಎಂಬುವರು ಗಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Write A Comment