
ಮಂಗಳೂರು,ಫೆ.24 : ನಗರದ ಬೋಳೂರು, ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತಾ ವರ್ಷಾವಧಿ ಮಹಾಪೂಜೆಯು ಫೆಬ್ರವರಿ 23ರ ಮಂಗಳವಾರದಂದು ರಾತ್ರಿ ಬಹಳ ವಿಜೃಂಭಣೆಯಿಂದ ಜರಗಿತು.

ಇದೇ ಸಂದರ್ಭದಲ್ಲಿ ಶ್ರೀ ದೇವಿಗೆ ಮಹಾರಂಗ ಪೂಜೆ ನಡೆಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಯಾದವೇಶ ಎಂ.ಪುತ್ರನ್ ಹಾಗೂ ಮೊಕ್ತೇಸರರು ಉಪಸ್ಥಿತರಿದ್ದರು.