ಅಂತರಾಷ್ಟ್ರೀಯ

ರಾಜಕುಮಾರಿಯ ಒಂದು ದಿನದ ಭೇಟಿಗಾಗಿ 27. ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ

Pinterest LinkedIn Tumblr

tahi-queen

ಬ್ಯಾಂಕಾಕ್: ಕಾಂಬೋಡಿಯಾದ ಬಡ ಪ್ರಾಂತ್ಯವೊಂದಕ್ಕೆ ಥಾಯ್ಲೆಂಡ್ ರಾಜಕುಮಾರಿ ಭೇಟಿ ನೀಡುತ್ತಿರುವ ಒಂದು ದಿನದ ಭೇಟಿಗಾಗಿ ಹವಾ ನಿಯಂತ್ರಿತ ಹೊರಮನೆ ಮತ್ತು ಐಷಾರಾಮಿ ಟಾಯ್ಲೆಟ್ ನಿರ್ಮಿಸಲು 27.45 ಲಕ್ಷ ರೂ. ವೆಚ್ಚ ಮಾಡಿರುವುದು ತೀವ್ರ ವಿವಾದ ಸೃಷ್ಟಿಸಿದೆ.

ಥಾಯ್ಲೆಂಡ್ ರಾಜಕುಮಾರಿ ಮಹಾಚಕ್ರಿ ಸಿರಿಂಧೋರ್ನ್ ಕಾಂಬೋಡಿಯಾಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ. ಅವರು ಮೊದಲ ದಿನ, ರತನಕ್ಕಿರಿ ಪ್ರಾಂತ್ಯದ ಸಂರಕ್ಷಿತ ಸರೋವರ ಯೀಕ್ ಲಾಹೋಮ್ ತಟದಲ್ಲಿ ಒಂದು ರಾತ್ರಿ ಕಳೆಯಲಿದ್ದಾರೆ.

ಇದಕ್ಕಾಗಿ ಸರೋವರದ ತಟದಲ್ಲಿ 8 ಚದರ ಮೀಟರ್ ವಿಸ್ತೀರ್ಣದಲ್ಲಿ ಐಷಾರಾಮಿ ಟಾಯ್ಲೆಟ್ ಹೊಂದಿರುವ ಹೊರಮನೆಯೊಂದನ್ನು ನಿರ್ಮಿಸಲಾಗಿದೆ. ಥಾಯ್ ಮೂಲದ ಎಸ್‌ಸಿಜಿ ನಿರ್ಮಾಣ ಕಂಪನಿ ಕೇವಲ 19 ದಿನಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ರಾಜಕುಮಾರಿ ಮಹಾಚಕ್ರಿ ಸಿರಿಂಧೋರ್ನ್ ಅವರ ಖಾಸಗಿ ಬಳಕೆಗೆಂದೇ ಐಷಾರಾಮಿ ಟಾಯ್ಲೆಟ್ ನಿರ್ಮಿಸಲಾಗಿದೆ.

ರಾಜಕುಮಾರಿ ನಿರ್ಗಮನದ ಬಳಿಕ ಈ ಐಷಾರಾಮಿ ಶೌಚಾಲಯವನ್ನು ಕೆಡವಲಾಗುತ್ತದಂತೆ. ವಿಶೇಷವೆಂದರೆ, ಮನೆ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕಚ್ಚಾವಸ್ತುಗಳನ್ನು ಬ್ಯಾಂಕಾಕ್‌ನಿಂದಲೇ ತರಿಸಲಾಗಿತ್ತಂತೆ. ರಾಜಕುಮಾರಿಗೆ ಶೌಚಾಲಯ ನಿರ್ಮಿಸಲು ಉತ್ತಮ ಗುಣಮಟ್ಟದ ಟಾಯ್ಲೆಟ್ ನಿರ್ಮಾಣಕ್ಕೆ ತಗುಲುವ ವೆಚ್ಚಕ್ಕಿಂತ 130 ಪಟ್ಟು ಹೆಚ್ಚಿನ ಹಣ ಖರ್ಚು ಮಾಡಲಾಗಿದೆ.

Write A Comment