
ತಮಿಳುನಾಡು: ಪ್ರೇಯಸಿ ಜೊತೆಗಿದ್ದ ಫೋಟೋ ವಾಟ್ಸಾಪ್ ನಲ್ಲಿ ಹರಿದಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಡೈರಿ ಅಭಿವೃದ್ಧಿ ಇಲಾಖೆ ಸಚಿವ ಬಿ.ವಿ. ರಮಣ ಅವರನ್ನು ಮುಖ್ಯಮಂತ್ರಿ ಜಯಲಲಿತಾ ಸಂಪುಟದಿಂದ ವಜಾಗೊಳಿಸಿದ್ದಾರೆ.
ಈ ಸಂಬಂಧ ಸಿಎಂ ಜಯಲಲಿತಾ ಪ್ರಕಟಣೆ ಹೊರಡಿಸಿದ್ದಾರೆ. ಸಚಿವ ಸ್ಥಾನದಿಂದ ಮಾತ್ರವಲ್ಲದೇ ತಿರುವಳ್ಳೂರು ಜಿಲ್ಲಾ ಕಾರ್ಯದರ್ಶಿ ಸ್ಥಾನದಿಂದಲೂ ಅಮಾನತು ಮಾಡಲಾಗಿದೆ. ಆದರೆ ಏನು ಕಾರಣ ಎಂಬುದನ್ನು ಜಯಲಲಿತಾ ಎಲ್ಲಿಯೂ ಉಲ್ಲೇಖಿಸಿಲ್ಲ,
ಮೂಲಗಳ ಪ್ರಕಾರ ಪ್ರೇಯಸಿ ಜೊತೆಗಿನ ಪೋಟೋ ಪ್ರಕರಣವೇ ರಮಣ ಅವರನ್ನು ವಜಾಗೊಳಿಸಲು ಕಾರಣ ಎಂದು ಮೂಲಗಳು ತಿಳಿಸಿವೆ,