ಕನ್ನಡ ವಾರ್ತೆಗಳು

ಚುನಾವಣೆ ಹಿನ್ನೆಲೆ: ದ.ಕ ಜಿಲ್ಲೆ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Pinterest LinkedIn Tumblr

sp_press_meet_1

ಮಂಗಳೂರು,ಫೆ.18: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಫೆಬ್ರವರಿ 20ರ ಶನಿವಾರ ಮೂರು ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರು ಪೊಲೀಸ್ ಬಂದೋಬಸ್ತ್ ಕುರಿತು ಮಾಹಿತಿ ನೀಡಿದರು.

ಫೆ.20ರಂದು ಉಡುಪಿ, ಮಂಗಳೂರು ಸೇರಿದಂತೆ 15 ರಾಜ್ಯದ 15 ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದ್ದು, ಮತದಾನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 824 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇವುಗಳಲ್ಲಿ 103 ಅತೀ ಸೂಕ್ಷ್ಮ, 289 ಸೂಕ್ಷ್ಮ ಹಾಗೂ 389 ಸಾಮಾನ್ಯ ಮತಗಟ್ಟೆಗಳಾಗಿವೆ. ಉಡುಪಿಯಲ್ಲಿ 936 ಮತಗಟ್ಟೆಗಳ ಪೈಕಿ 51 ಅತೀ ಸೂಕ್ಷ್ಮ, 142 ಸೂಕ್ಷ್ಮ, 689 ಸಾಮಾನ್ಯ ಮತಗಟ್ಟೆಗಳಾಗಿವೆ.

sp_press_meet_2 sp_press_meet_3 sp_press_meet_4

ಚಿಕ್ಕಮಗಳೂರಿನಲ್ಲಿ 977 ಮತಗಟ್ಟೆಗಳಲ್ಲಿ 114 ಅತೀ ಸೂಕ್ಷ್ಮ, 301 ಸೂಕ್ಷ್ಮ, 523 ಸಾಮಾನ್ಯ ಮತಗಟ್ಟೆಗಳಾಗಿವೆ. ಪೊಲೀಸ್ ಸಿಬ್ಬಂದಿಗಳು : ಮೂರು ಜಿಲ್ಲೆಗಳಲ್ಲಿ ಮತದಾನದ ದಿನ ಭದ್ರತೆಗಾಗಿ 2,500 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 2,000 ಗೃಹ ರಕ್ಷಕರು ಹಾಗೂ ಕೆಎಸ್ಆರ್‌ಪಿಯ 25 ತುಗುಡಿಗಳನ್ನು ನಿಯೋಜಿಸಲಾಗಿದೆ. ಅಂದಹಾಗೆ ಫೆ.20ರ ಶನಿವಾರ ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೀದರ್ ಸೇರಿದಂತೆ 15 ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ

Write A Comment