ರಾಷ್ಟ್ರೀಯ

ರಾಷ್ಟ್ರಪ್ರೇಮದ ಬಗ್ಗೆ ಬಿಜೆಪಿಯಿಂದ ಪಾಠ ಬೇಕಿಲ್ಲ: ಕಪಿಲ್ ಸಿಬಲ್

Pinterest LinkedIn Tumblr

Kapil-Sibalನವದೆಹಲಿ: ರಾಷ್ಟ್ರಪ್ರೇಮದ ಬಗ್ಗೆ ಬಿಜೆಪಿಯಿಂದ ಕಾಂಗ್ರೆಸ್ಸೀಗರಿಗೆ ರಾಷ್ಟ್ರಪ್ರೇಮದ ಪಾಠ ಬೇಕಿಲ್ಲ ಎಂದು ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಲ್ ಹೇಳಿದ್ದಾರೆ.

ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ದೇಶದ್ರೋಹ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರು ದೇಶದ್ರೋಹಿ ಘೋಷಣೆ ಕೂಗಿದವರ ಪರವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಾರೆ ಇದೇನಾ ಕಾಂಗ್ರೆಸ್ಸಿಗರ ದೇಶಪ್ರೇಮ ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ಸಿಬಲ್, ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಕಚೇರಿ ಮೇಲೆ ಭಾರತ ಧ್ವಜ ಹಾರಾಡುವುದಿಲ್ಲ. ಬಿಜೆಪಿನವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾತುರಾಮ್ ಗೂಡ್ಸೆ ದಿನಾಚರಣೆಯನ್ನು ಆಚರಿಸುತ್ತಾರೆ. ಇದಲ್ಲದೆ ನಿನ್ನೆ ಕೋರ್ಟ್ ಆವರಣದಲ್ಲಿ ಬಿಜೆಪಿ ಶಾಸಕ ಒಪಿ ಶರ್ಮಾ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ಮಾಡುತ್ತಾರೆ ಇದೇನಾ ದೇಶಪ್ರೇಮ ಅಂದರೆ. ಇವರ ವಿರುದ್ಧ ಕೇಂದ್ರ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.

Write A Comment