ಸೈನಿಕ ಹನುಮಂತ ಕೊಪ್ಪದ ಅವರನ್ನು ಬದುಕಿಸುವ ವೈದ್ಯರ ಅವಿರತ ಶ್ರಮ ಫಲ ನೀಡಲಿಲ್ಲ. ಇದಕ್ಕೆ ಕಾರಣಗಳು ಹಲವಿವೆ.
ಹನುಮಂತಪ್ಪ ಅವರನ್ನು ಆಸ್ಪತ್ರೆಗೆ ತಂದು ಸೇರಿಸಿದ ಹೊತ್ತಿನಿಂದ ಅವರು ಕೊನೆಯ ಉಸಿರು ಎಳೆಯುವವರೆಗೂ ಅವರ ದೇಹದಲ್ಲಿ ಏನೇನು ಆಯ್ತು ಎಂಬುದನ್ನು ಸೇನಾ ಆಸ್ಪತ್ರೆಯ ವೈದ್ಯರು ಹೀಗೆ ವಿವರಿಸಿದ್ದಾರೆ.
1.ಫೆ.9ರಂದು ಸೇನಾ ಆಸ್ಪತ್ರೆಗೆ ಕೊಪ್ಪದ್ ಅವರನ್ನು ಕರೆತಂದ ವೇಳೆ ದೇಹಸ್ಥಿತಿ ಗಂಭೀರವಾಗಿತ್ತು. 6 ದಿನ ಹಿಮದೊಳಗೆ ಸಿಲುಕಿಕೊಂಡ ಕಾರಣ, ಅವರ ದೇಹದ ಹಲವು ಭಾಗಕ್ಕೆ ರಕ್ತ ಸಂಚಾರ ಸರಿಯಾಗಿ
ಪೂರೈಕೆಯಾಗಿರಲಿಲ್ಲ. ರಕ್ತದೊತ್ತಡ ಕಡಿಮೆಯಾಗಿತ್ತು. ಹೃದಯ ಭಾರೀ ಪ್ರಮಾಣದಲ್ಲಿ ಬಡಿದುಕೊಳ್ಳುತ್ತಿತ್ತು. ದೇಹದ ತಾಪಮಾನ ಸಾಮಾನ್ಯ ಸ್ಥಿತಿಯಲ್ಲಿತ್ತು.
2. 6 ದಿನದಿಂದ ಆಹಾರ ಸೇವಿಸಿರದಿದ್ದ ಕೊಪ್ಪದ್‌ಗೆಮೊದಲು ಗ್ಲುಕೋಸ್ ನೀಡಲಾಯಿತು. ದೇಹದ ತಾಪಮಾನವನ್ನು 37 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಕಾಪಾಡುವ ವ್ಯವಸ್ಥೆ ಮಾಡಲಾಯ್ತು.
3 ನಂತರ ದೇಹದ ಎಲ್ಲಾ ಭಾಗಗಳಿಗೂ ರಕ್ತ ಪೂರೈಕೆ ವ್ಯವಸ್ಥೆ ಮಾಡಲಾಯಿತು.
4 ಆಮ್ಲಜನಕ ಮತ್ತು ಗ್ಲುಕೋಸ್‌ನ ಕೊರತೆಯಿಂದಾಗಿ ಜೀವಕೋಶಗಳು ಚಯಾಪಚಯ (ಮೆಟಾಬೋಲಿಕ್) ಪ್ರಕ್ರಿಯೆ ನಡೆಸುವುದಕ್ಕೆ ಸಾಧ್ಯವಾಗಿರಲಿಲ್ಲ. ಮತ್ತೂಂದೆಡೆ ಆಮ್ಲಜನಕ ಕೊರತೆ
ಯಿಂದಾಗಿ ಜೀವಕೋಶಗಳು ಅತ್ಯಂತ ದುರ್ಬಲ ಸ್ಥಿತಿ ತಲುಪಿದ್ದವು.
5 ಹೀಗೆ ಜೀವಕೋಶಗಳು ಸೂಕ್ತವಾಗಿ ಕೆಲಸ ಮಾಡಲಾಗದ ಸ್ಥಿತಿ ತಲುಪಿದ ಕಾರಣ, ದೇಹದಲ್ಲಿನ ಕಲ್ಮಷ ಪದಾರ್ಥಗಳು ರಕ್ತವನ್ನು ಸೇರಲು ಪ್ರಾರಂಭವಾಯಿತು.
6 ಮತ್ತೂಂದೆಡೆ ರಕ್ತದ ಒತ್ತಡ ಕಡಿಮೆಯಾದ ಕಾರಣ ಮೂತ್ರಕೋಶ, ಪಿತ್ಥಜನಕಾಂಗ, ಮೆದುಳನ್ನು ಹಾನಿ ಉಂಟಾಯಿತು.
7 ಕೊಪ್ಪದ ಅವರನ್ನು ಆಸ್ಪತ್ರೆಗೆ ಕರೆತಂದ 6 ಗಂಟೆಗಳಲ್ಲಿ ಅವರ ಮೂತ್ರಕೋಶ ಸಂಪೂರ್ಣ ಸ್ತಬಟಛಿವಾಗಿತ್ತು.
8 ಮರಣಕ್ಕೂ ಮುನ್ನ ಅವರ ಮೆದುಳು ಊದಿ ಕೊಂಡಿದ್ದು ಮತ್ತು ಅದರ ಚಟುವಟಿಕೆ ಕೆಲವೇ ಗಂಟೆಗೆ ಮುನ್ನ ಕ್ಷೀಣಗೊಂಡಿತ್ತು.
9 ಮೆದುಳು ಊದಿಕೊಂಡಿತ್ತು. ಗುರುವಾರ ಬೆಳಗ್ಗೆ ರಕ್ತದೊತ್ತಡ ಮತ್ತಷ್ಟು ಇಳಿಯಿತು. ಇದಾದ ಕೆಲ ಗಂಟೆಗಳಲ್ಲಿ ಅಂದರೆ 11.45ರ ಸುಮಾರಿಗೆ ಕೊಪ್ಪದ್‌ಗೆ ಹೃದಯಾಘಾತವಾಗಿ ಅವರು ಸಾವನ್ನಪ್ಪಿದರು.
-ಉದಯವಾಣಿ