ಕನ್ನಡ ವಾರ್ತೆಗಳು

ನೀವು ಪಡೆಯಿರಿ ಹಠಯೋಗಿಗಳ ಆಶಿರ್ವಾದ; ಕುಂದಾಪುರದ ಯಡಮೊಗ್ಗೆಯಲ್ಲಿ ಫೆ.18,19 ಸಾಧು ಸಂತರ ಜಾತ್ರೆ

Pinterest LinkedIn Tumblr

ಜೋಗಿ ಮಠಕ್ಕೆ ಆಗಮಿಸಲಿದೆ ಭಾರಾಪಂಥದ ಝಂಡಿ ಉತ್ಸವ

ಉಡುಪಿ: 450ಕ್ಕೂ ಮಿಕ್ಕಿ ಯೋಗಿಗಳನ್ನು- ಸಾಧು ಸಂತರನ್ನು ಸಿದ್ದ ಪುರುಷರನ್ನು ನೀವು ಒಂದೆಡೆ ಎಲ್ಲಿಯಾದರೂ ನೋಡಿದ್ದೀರಾ?? ಹಠಯೋಗಿಗಳಿಂದ ಆಶೀರ್ವಾದ ಪಡೆದಿದ್ದೀರಾ?? ಇಲ್ಲವಾದರೆ ನಿಮಗಿದು ಸುವರ್ಣಾವಕಾಶ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಭಾರಾ ಪಂಥದ ಝಂಡಿ ಉತ್ಸವ ಈ ಬಾರಿ  ಫೆಬ್ರವರಿ 18-19 ರಂದು ಕುಂದಾಪುರ ಯಡಮೊಗ್ಗೆಯ ಹಲವರಿ ಜೋಗಿ ಮಠಕ್ಕೆ ಆಗಮಿಸಲಿದೆ ಎಂದು ಶ್ರೀ ಕ್ಷೇತ್ರ ಕೊಡಚಾದ್ರಿ ಹಲವರಿ ಜೋಗಿ ಮಠ ಅಭಿವೃದ್ದಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ|| ಕೇಶವ ಕೋಟೇಶ್ವರ ಹೇಳಿದ್ದಾರೆ.

ಅವರು ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು.

kundapura_Jogi mutt_Sadhu (7) kundapura_Jogi mutt_Sadhu (11) kundapura_Jogi mutt_Sadhu (6) kundapura_Jogi mutt_Sadhu (8) kundapura_Jogi mutt_Sadhu (10) kundapura_Jogi mutt_Sadhu (9)

ಸುಮಾರು 1100 ವರ್ಷಗಳ ಇತಿಹಾಸವಿರುವ ಪ್ರಸಿದ್ದ ಕ್ಷೇತ್ರವಾದ ಹಲವರಿ ಮಠಕ್ಕೆ 10-11 ನೇ ಶತಮಾನಗಳಿಂದಲೂ ಈ ಉತ್ಸವ ಹನ್ನೆರಡು ವರ್ಷಗಳಿಗೊಮ್ಮೆ ಬರುತ್ತಿತ್ತು ಈಗಲೂ ಬರುತ್ತಿದೆ. ಈ ಬಾರಿ ಉತ್ಸವದ ಅಂದವನ್ನು ಕಣ್ತುಂಬಿಸಿಕೊಳ್ಳುವುದರಿಂದ ತಪ್ಪಿಸಿಕೊಂಡರೆ ಮತ್ತೆ ಹನ್ನೆರಡು ವರ್ಷ ಕಾಯಬೇಕಾಗುತ್ತದೆ.

ತ್ರಯಾಂಬಕೇಶ್ವರದಿಂದ 1160 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವ ಸಾಧುಸಂತರನ್ನು ಸ್ವಾಗತಿಸುವ ಉಪಚರಿಸುವ ಸೇವೆಗೈಯುವ ಸುವರ್ಣಾವಕಾಶ ನಮ್ಮ ಪಾಲಿಗೆ ಒದಗಿ ಬಂದಿದೆ ಹಾಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳ ಬೇಕಾಗಿದೆ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಜೋಗಿ ಸಮಾಜ ಸೇವಾ ಸಂಘದ ಶೇಖರ್ ಬಳೆಗಾರ,ಝಂಡಿ ಪ್ರಚಾರ ಸಮಿತಿ ಕುಂದಾಪುರದ ಶಿವಯ ಬಳೇಗಾರ, ಕ್ಷೇತ್ರ ಸಿದ್ಧ ಪೀಠ ಕೂಡಚಾದ್ರಿ ಹಲವರಿ ಜೋಗಿ ಮಠದ ಪ್ರಧಾನ ಕಾರ್ಯದರ್ಶಿ ರಮೇಶ್ ಜೋಗಿ,ನಾಗೇಶ್,ಮತ್ತು ರಾಘವೇಂದ್ರ ಕರೆಮನೆ ಉಪಸ್ಥಿತರಿದ್ದರು.

(ಸಾಂದರ್ಭಿಕ ಚಿತ್ರಗಳು)

Write A Comment