ನವದೆಹಲಿ : ಪಾಕ್-ಅಮೆರಿಕನ್ ಉಗ್ರ ಎಜೆಂಟ್ ಡೇವಿಡ್ ಹೆಡ್ಲಿ ಕೊನೆಗೂ 2008 ರ 26/11 ಮುಂಬಯಿ ದಾಳಿ ಯಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದು, ದಾಳಿ ಪಾಕಿಸ್ತಾನ ಸರ್ಕಾರದ ಸಹಕಾರದೊಂದಿಗೆ ನಡೆದಿತ್ತು ಎಂದು ಹೇಳಿದ್ದಾನೆ.
ಅಮೆರಿಕಾದ ನ್ಯಾಯಲಯವೊಂದರಲ್ಲಿ ಭಾನುವಾರ ನಡೆದ ವಿಚಾರಣೆ ವೇಳೆ ಹೆಡ್ಲಿ ಈ ವಿಚಾರವನ್ನು ಒಪ್ಪಿಕೊಂಡಿದ್ದಾನೆ ಎಂದು ಸಿಎನ್‌ಎನ್ ಐಬಿಎನ್ ಎಕ್ಸ್‌ಕ್ಲೂಸಿವ್ ವರದಿ ಮಾಡಿದೆ.
ದಾಳಿಯ ಹೊಣೆಯನ್ನು ಐಎಸ್‌ಐ ಮೇಜರ್ ಇಕ್ಬಾಲ್ ,ಸಮೀರ್ ಅಲಿ ನಿರ್ವಹಿಸಿದ್ದು,ಎಲ್ ಇಟಿ ಉಗ್ರ ಜಕಿ ಉರ್ ರೆಹಮಾನ್ ಲಖ್‌ವಿ ಅವರಿಗೆ ಐಎಸ್‌ಐ ಬ್ರಿಗೇಡಿಯರ್ ಒಬ್ಬರು ನಿರ್ದೇಶನ ನೀಡುತ್ತಿದ್ದರು ಎಂದು ಹೆಡ್ಲಿ ಹೇಳಿಕೊಂಡಿದ್ದಾನೆಎಂದು ವರದಿಯಾಗಿದೆ.
ಹೆಡ್ಲಿ ಅಮೆರಿಕಾ ನ್ಯಾಯಾಲಯದಿಂದ 35 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಮುಂಬಯಿ ದಾಳಿಗೆ ಸಂಬಂದಿಸಿದಂತೆ ಆತನನ್ನು ಫೆಬ್ರವರಿ 8ರಂದು ಭಾರತದ ನ್ಯಾಯಲಾಯಲದ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಗುತ್ತಿದೆ ಎಂದು ಸರ್ಕಾರಿ ಅಭಿಯೋಜಕ ಉಜ್ವಲ್ ನಿಖಮ್ ತಿಳಿಸಿದ್ದಾರೆ.
-ಉದಯವಾಣಿ