ರಾಷ್ಟ್ರೀಯ

ತಮಿಳುನಾಡು ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸ್ಫೋಟ, ಓರ್ವ ಸಾವು

Pinterest LinkedIn Tumblr

col-busವೆಲ್ಲೊರು: ತಮಿಳುನಾಡಿನ ವೆಲ್ಲೊರು ಜಿಲ್ಲೆಯ ನತ್ರಂಪಲ್ಲಿಯಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸಂಭವಿಸಿದ ಅನುಮಾನಸ್ಪದ ಸ್ಫೋಟದಲ್ಲಿ ಚಾಲಕರೊಬ್ಬರು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಘಟನೆಯಿಂದ ಕೆಲಕಾಲ ಸ್ಥಳೀಯರಲ್ಲಿ ತೀವ್ರ ಆತಂಕ ಉಂಟು ಮಾಡಿತ್ತು.

ಇಂದು ಬೆಳಗ್ಗೆ ಸುಮಾರು 11.30ರ ಸುಮಾರಿಗೆ ಭಾರತಿ ದಾಸನ್ ಎಂಜಿನಿಯರಿಂಗ್ ಕಾಲೇಜ್ ನ ಬಸ್ ಚಾಲಕ ಕಾಮರಾಜ್ ಅವರು ಮುಖ ತೊಳೆಯಲು ತೆರಳಿದಾಗ ಈ ಸ್ಫೋಟ ಸಂಭವಿಸಿದೆ. ಈ ವೇಳೆ ಬಸ್ ಕ್ಲೀನರ್ ಗುರು ಸುಮಾರು 20 ಅಡಿ ದೂರದಲ್ಲಿದ್ದ ಎಂದು ಸ್ಥಳೀಯ ಮೂಲಕ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿವೆ,

ಪ್ರಾಥಮಿಕ ಮಾಹಿತಿಯ ಪ್ರಕಾರ, ಮೇಲಿನಿಂದ ಬಂದ ವಸ್ತುವೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಕಾಲೇಜ್ ಕ್ಯಾಂಪಸ್ ನಲ್ಲಿ ಬಸ್ ಚಾಲಕ ಕಾಮರಾಜ್ ಮೃತಪಟ್ಟಿದ್ದಾರೆ.

ಕಾಲೇಜಿನಲ್ಲಿ ಸ್ಫೋಟ ಸಂಭವಿಸಿದ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳವನ್ನು ಸಂಪೂರ್ಣವಾಗಿ ಶೋಧಿಸಿದ್ದಾರೆ.

ಸ್ಫೋಟದಿಂದಾಗಿ ಐದು ಬಸ್ ಗಳು ಜಖಂಗೊಂಡಿದ್ದು, ಸ್ಫೋಟದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Write A Comment