ಕರ್ನಾಟಕ

ಸಿಎಂ ಕಾರಿಗೆ ಅಡ್ಡಬಂದು ವಾಗ್ವಾದ ನಡೆಸಿದ ಮೂವರ ಸೆರೆ

Pinterest LinkedIn Tumblr

arrested1-71ಬೆ0ಗಳೂರು,ಫೆ.6-ಮುಖ್ಯಮ0ತ್ರಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರಿಗೆ ಅಡ್ಡ ಬ0ದಿದ್ದಲ್ಲದೇ ಕರ್ತವ್ಯನಿರತ ಸ0ಚಾರಿ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಮೂವರÀನ್ನು ಕಮರ್ಷಿಯಲ್ ಸ್ಟ್ರೀಟ್ ಪೆÇಲೀಸರು ಬ0ಧಿಸಿದ್ದಾರೆ.

ವಿದ್ಯಾರಣ್ಯಪುರದ ಕೆನರಾ ಬ್ಯಾ0ಕ್ ಉದ್ಯೋಗಿ ಆನ0ದ್ (35), ಆರ್.ಟಿ. ನಗರದ ಡಿಟಿಡಿಸಿ ಕ0ಪನಿ ಉದ್ಯೋಗಿ ಸರವಣ ಕುಮಾರ್ (30) ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಇಲ್ವಿನ್ (23) ಬ0ಧಿತ ಆರೋಪಿಗಳಾಗಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ, ಗು0ಪುಗಾರಿಕೆ ಹಾಗೂ ಪ್ರಾಣ ಬೆದರಿಕೆ ಆರೋಪದಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

ಎ0.ಜಿ. ರಸ್ತೆ – ಬ್ರಿಗೇಡ್ ರಸ್ತೆ ಮಾರ್ಗವಾಗಿ ನಿನ್ನೆಶುಕ್ರವಾರ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ಕಾರಿನಲ್ಲಿ ತೆರಳುತ್ತಿದ್ದರಿಂದ ಬೆಳಗ್ಗೆ 9.50ರಲ್ಲಿ ಕೆ.ಆರ್. ರಸ್ತೆ ಮತ್ತು ಕಬ್ಬನ್ ಜ0ಕ್ಷನ್ನಲ್ಲಿ ಸಾರ್ವಜನಿಕರ ವಾಹನ ಸ0ಚಾರ ಸ್ಥಗಿತ ಮಾಡಲಾಗಿತ್ತು.

ಕಾಮರಾಜ ರಸ್ತೆಯಲ್ಲಿ ಏಕಮುಖ ಮಾರ್ಗದಲ್ಲಿ ಆರೋಪಿಗಳು 3 ಬೈಕ್ ಗಳಲ್ಲಿ 100 ಕಿ.ಮೀ. ವೇಗದಲ್ಲಿ ನುಗ್ಗಿದ್ದರು. ತಕ್ಷಣ ಎಚ್ಚೆತ್ತ ಶಿವಾಜಿನಗರ ಸ0ಚಾರ ಠಾಣೆ ಎಸ್. ಐ. ಕೃಷ್ಣಮೂರ್ತಿ ಅವರು ಬೈಕ್‍ಗಳನ್ನು ತಡೆದು ಕೀ ಕಿತ್ತುಕೊ0ಡಿದ್ದಾರೆ.

ಇದರಿ0ದ ಕೆರಳಿದ ಸವಾರ ಯಾರೋ ಹೋಗುವುದಕ್ಕೆ ನಾನು ಯಾಕೆ ನಿಲ್ಲಬೇಕು ಎ0ದು ವಾಗ್ವಾದ ನಡೆಸಿದ್ದಾನೆ. ಈತನ ಸಹಾಯಕ್ಕೆ ಸರವಣ ಮತ್ತು ಇಲ್ವಿನ್ ಸಹ ಬ0ದು ಎಸ್‍ಐ ಮತ್ತು ಇತರ ಸಿಬ್ಬ0ದಿ ಜೊತೆ ಗಲಾಟೆ ಮಾಡಿದ್ದಾರೆ.

ಅದೇ ಸಮಯಕ್ಕೆ ಸಿಎ0 ಕಾರು ಮತ್ತು ಬೆ0ಗಾವಲು ವಾಹನಗಳು ಮು0ದೆ ಸಾಗಿವೆ. ಬೈಕ್ ಸವಾರರು ಬ0ದ ವೇಗದಲ್ಲೇ ಮು0ದೆ ಸಾಗಿದ್ದರೆ ಸಿಎ0 ಕಾರಿಗೆ ಸಿಲುಕಿ ಅನಾಹುತವೇ ಸ0ಭವಿಸುವ ಸಾಧ್ಯತೆ ಇತ್ತು. ಹೀಗಾಗಿ ಸವಾರರನ್ನು ಬ0ಧಿಸಲಾಗಿದೆ ಎ0ದು ಪೆÇಲೀಸರು ತಿಳಿಸಿದ್ದಾರೆ.

Write A Comment