
___ಸತೀಶ್ ಕಾಪಿಕಾಡ್
ಮಂಗಳೂರು : ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ “ಪವಿತ್ರ” ಬೀಡಿದ ಪೊಣ್ಣು ಎಂಬ ಟ್ಯಾಗ್‌ಲೈನ್‌ನ ತುಳು ಚಲನ ಚಿತ್ರವು ಶುಕ್ರವಾರ ಮಂಗಳೂರಿನ ಸುಚಿತ್ರ ಟಾಕೀಸ್‌ನಲ್ಲಿ ಬಿಡುಗಡೆ ಗೊಂಡಿತು.
ಚಂಡಿಕೋರಿ ಚಲನ ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ದೀಪ ಬೆಳಗಿಸುವ ಮೂಲಕ “ಪವಿತ್ರ” ತುಳು ಸಿನಿಮಾಕ್ಕೆ ಚಾಲನೆ ನೀಡಿದರು. ತುಳು ಸಿನಿಮಾರಂಗಕ್ಕೆ ಈಗ ಪರ್ವಕಾಲ. ಬಹಳಷ್ಟು ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ, ಸಮಾಜಕ್ಕೆ ಸಂದೇಶ ನೀಡುವ ಮತ್ತು ಸದಭಿರುಚಿಯ ಸಿನಿಮಾಗಳನ್ನು ಪ್ರೇಕ್ಷಕರು ಖಂಡಿತಾ ಸ್ವೀಕರಿಸುತ್ತಾರೆ.
ಉತ್ತಮ ಚಿತ್ರಗಳ ಜತೆಗೆ ಅನೇಕ ಯುವ ಪ್ರತಿಭಾವಂತ ಕಲಾವಿದರು ಕೂಡಾ ತುಳು ಸಿನಿಮಾ ರಂಗಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು. ಇಲ್ಲಿಯ ಜನರು ಎಲ್ಲಾ ತುಳು ಚಿತ್ರಗಳಿಗೆ ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಅದೇ ರೀತಿ ಪವಿತ್ರ ಸಿನಿಮಾಕ್ಕೂ ಹೆಚ್ಚಿನ ರೀತಿಯ ಪ್ರೋತ್ಸಾಹ ನೀಡುವ ಮೂಲಕ ಚಿತ್ರ ಯಶಸ್ಸುಗಳಿಸಲು ಸಹಕರಿಸಬೇಕು ಎಂದು ಹೇಳಿ ಅವರು ಚಿತ್ರಕ್ಕೆ ಶುಭಾ ಕೋರಿದರು.
ಪವಿತ್ರ ತುಳು ಚಲನ ಚಿತ್ರದ ನಿರ್ಮಾಪಕ ಅನಂತರಾಮ ರಾವ್ ಎರ್ಮಾಳ್ ಮಾತನಾಡಿ ತಾನು ತುಳು ಭಾಷೆಯ ಮೇಲಿನ ಅಭಿಮಾನ, ಪ್ರೀತಿಯಿಂದ ೮೩ರ ಹರೆಯದಲ್ಲಿ ತುಳು ಸಿನಿಮಾ ಮಾಡಿದ್ದೇನೆ. ಸಿನಿಮಾವನ್ನು ಪ್ರೇಕ್ಷಕರು ಸ್ವೀಕರಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಅಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಜಯಕಿರಣ ಪತ್ರಿಕೆಯ ಮಾಲಕ ಪ್ರಕಾಶ್ ಪಾಂಡೇಶ್ವರ್, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ನಿರ್ಮಾಪಕರಾದ ಗಂಗಾಧರ ಶೆಟ್ಟಿ, ಕಿಶೋರ್ ಕೊಟ್ಟಾರಿ, ಆರ್. ಧನ್‌ರಾಜ್, ಶರತ್ ಕದ್ರಿ, ಪಮ್ಮಿ ಕೊಡಿಯಾಲ್ ಬೈಲ್, ವಾಮನ್ ಶೆಟ್ಟಿ, ರೂಪೇಶ್, ರಂಗಭೂಮಿ ಹಾಗೂ ಚಿತ್ರ ನಟರಾದ ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಚಿತ್ರದ ನಾಯಕಿ ಚಿರಶ್ರೀ ಅಂಚನ್, ರಂಜನ್ ಬೋಳೂರ್, ರಂಜಿತ್ ಸುವರ್ಣ ಉಪಸ್ಥಿತರಿದ್ದರು.
ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದ್ದರು. ಪವಿತ್ರ ಸಿನಿಮಾ ಮಂಗಳೂರಿನಲ್ಲಿ ಸುಚಿತ್ರ, ಬಿಗ್‌ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್, ಬಿ.ಸಿ.ರೋಡ್‌ನಲ್ಲಿ ನಕ್ಷತ್ರ, ಮೂಡಬಿದ್ರೆಯಲ್ಲಿ ಅಮರಶ್ರೀ, ಪುತ್ತೂರಿನಲ್ಲಿ ಅರುಣಾ ಚಿತ್ರ್ರ ಮಂದಿರದಲ್ಲಿ ತೆರೆ ಕಂಡಿದೆ.
ಕರಾವಳಿಯಲ್ಲಿ ಬೀಡಿ ಉದ್ಯಮ ಬಹು ದೂಡ್ಡ ಉದ್ಯಮವಾಗಿ ಬೆಳೆದಿದ್ದು ಇದರ ಹಿಂದಿನ ನಿಜವಾದ ಆಶಯ ಹಾಗು ಪ್ರಸಕ್ತ ಬದಲಾದ ಸನ್ನಿವೇಶವನ್ನು ಚಿತ್ರದಲ್ಲಿ ವಿಭಿನ್ನವಾಗಿ ಸೃಷ್ಠಿಸಲಾಗಿದೆ. ಜೆ.ಜಿ.ಕೃಷ್ಣ ಛಾಯಾಗ್ರಹಣ, ರಿಸೆಲ್ ಸಾಹಿ ಸಂಗೀತ, ಅಶೋಕ್‌ರಾಜ್ ನೃತ್ಯ ಈ ಸಿನಿಮಾಕ್ಕೆ ಇದೆ. ಸಿದ್ದರಾಜ್ ಸಾಹಸ ನಿರ್ದೇಶನದಲ್ಲಿ ಎರಡು ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.ಪವಿತ್ರ ಸಿನಿಮಾದಲ್ಲಿ ಕುಸೇಲ್ದರಸೆ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಅಭಿನಯಿಸಿದ್ದಾರೆ.
ಇನ್ನುಳಿದಂತೆ ಶ್ರವಂತ್,ಚಿರಶ್ರೀ ಉಮೇಶ್ ಮಿಜಾರ್, ರಂಜನ್ ಬೋಳೂರು, ರಘು ಪಾಂಡೇಶ್ವರ್, ಮನೋಜ್ ಪುತ್ತೂರು, ಶೋಭಾ ರೈ, ವಿದ್ಯಾ, ಸುಪ್ರೀತ, ದೀಪಿಕಾ, ರಂಜಿತಾ ಶೇಟ್, ರಿತೇಶ್ ಮಂಗಳೂರು, ವಸಂತ್, ತಿಮ್ಮಪ್ಪ ಕುಲಾಲ್ ಮೊದಲಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕತೆಯನ್ನು ನಿರ್ಮಾಪಕ ಅನಂತರಾಮ್ ರಾವ್ ಎರ್ಮಾಳ್ ಒದಗಿಸಿದ್ದಾರೆ. ಚಿತ್ರಕತೆ, ನಿರ್ದೇಶನ: ನಾಗವೆಂಕಟೇಶ್, ಸಾಹಿತ್ಯ ಸಂಭಾಷಣೆ:ರಂಜಿತ್ ಸುವರ್ಣ,