
ಮೆಹಸನಾ: ಗುಜರಾತ್ನ ಭಿಕ್ಷುಕರೊಬ್ಬರು 10 ಹೆಣ್ಣು ಮಕ್ಕಳಿಗೆ ಚಿನ್ನದ ಓಲೆ ದಾನ ಮಾಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.
ಖಿಮ್ಜಿಬಾಯಿ ಪ್ರಜಾಪತಿ ಎಂಬ 68 ವರ್ಷದ ವ್ಯಕ್ತಿ ಕಳೆದ 13 ವರ್ಷಗಳಿಂದ ಭಿಕ್ಷೆ ಎತ್ತಿದ ಹಣದಲ್ಲಿ ಅಂಗನವಾಡಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ನೀಡಿ ಗಮನ ಸೆಳೆದಿದ್ದರು. ಈ ಬಾರಿ ಅವರು ಕೊಳೆಗೇರಿಯಲ್ಲಿ ವಾಸಿಸುವ 10 ಬಡ ಹೆಣ್ಣುಮಕ್ಕಳಿಗೆ ಚಿನ್ನದ ಓಲೆ ನೀಡಿದ್ದಾರೆ.
ಪ್ರತಿ ಚಿನ್ನದ ಓಲೆಗೆ 13,000 ರೂ. ವೆಚ್ಚ ಮಾಡಿದ್ದಾರೆ ಪ್ರಜಾಪತಿ. ಬಡ ಹೆಣ್ಣುಮಕ್ಕಳ ಶಿಕ್ಷಣ ಉತ್ತೇಜಿಸುವ ದೃಷ್ಟಿಯಿಂದ ಪ್ರಜಾಪತಿ ನಡೆಸಿದ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅಂಗವಿಕಲರಾಗಿರುವ ಪ್ರಜಾಪತಿ ಈವರೆಗೆ 80 ಲಕ್ಷ ರೂ.ಗಳನ್ನು ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದಾನ ಮಾಡಿದ್ದಾರೆ.