
ಉಳ್ಳಾಲ,ಫೆ.05: ರೋಗಿಗಳಿಗೆ, ಬಡವರಿಗೆ, ನಿರ್ಗತಿಕ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳಿಗೆ ಇಸ್ಲಾಂ ಮೊದಲ ಪ್ರಾಶಸ್ತ್ಯ ನೀಡಿದೆ. ಪ್ರವಾದಿಯವರು ಬಡಕುಟುಂಬಗಳಿಗೆ, ರೋಗಿಗಳಿಗೆ ನೆರವು ನೀಡುವವರ ಸಮಸ್ಯೆಗಳು ಇತ್ಯರ್ಥ ಕಾಣಲು ಸಾಧ್ಯ ಎಂದಿದ್ದರು. ಈ ಕಾರ್ಯವನ್ನು ತೊಕ್ಕೊಟ್ಟು ಎಸ್ಎಸ್ಎಫ್ ರಿಲೀಫ್ ಸರ್ವಿಸ್ ಮಾಡುತ್ತಿದೆ ಎಂದು ಕೆಸಿಎಫ್ ದುಬೈ ಝೋನ್ ಅಧ್ಯಕ್ಷ ಮೆಹ್ಬೂಬ್ ಸಖಾಫಿ ಕಿನ್ಯ ಹೇಳಿದರು.
ಅವರು ಚೆಂಬುಗುಡ್ಡೆ ಸಮೀಪದ ದಾರಂದಬಾಗಿಲು ಬಳಿ ಎಸ್ಎಸ್ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ನ ಆಶ್ರಯದಲ್ಲಿ ಶೈಖ್ ಅಬ್ದುಲ್ ಖಾದರ್ ಜೀಲಾನಿ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಗಿಗಳಿಗೆ ಉತ್ತಮ ಆರೋಗ್ಯ ಸಿಗಲು ನಾವೆಲ್ಲ ಒಗ್ಗೂಡಿ ಪ್ರಾರ್ಥಿಸಬೇಕು ಮತ್ತು ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವನ್ನು ನೀಡಲು ಎಲ್ಲರೂ ಮುಂದೆ ಬರಬೇಕು ಎಂದು ಕರೆ ನೀಡಿದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲವಲಯ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.ದಾರಂದಬಾಗಿಲು ಮಸೀದಿಯ ಇಮಾಂ ಅಬೂಬಕರ್ ಮದನಿ ದುವಾ ನೆರವೇರಿಸಿದರು.
ಚೆಂಬುಗುಡ್ಡೆ ಜುಮಾ ಮಸೀದಿ ಖತೀಬ್ ಹಂಝ ಮದನಿ, ಜುನೈದ್ ಸಅದಿ, ಉಸ್ಮಾನ್ ಕಲ್ಲಾಪು, ನೌಶಾದ್ ತಾರಿಪಡ್ಪು, ಹನೀಫ್ ದಾರಂದಬಾಗಿಲು ಮಸೀದಿಯ ಸದಸ್ಯ ರಫೀಕ್, ಎಸ್ಸೆಸ್ಸೆಫ್ ಚೆಂಬುಗುಡ್ಡೆ ಶಾಖೆಯ ಅಧ್ಯಕ್ಷ ಮನ್ಸೂರ್, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ, ಕಾರ್ಯದರ್ಶಿ ಬಾತಿಷ್ ಮಂಚಿಲ, ಕನ್ವಿನರ್ ಅನ್ಸಾರ್ ಮಾಲಿಕ್, ಸದಸ್ಯರಾದ ಜುನೈದ್ ಮದನಿನಗರ, ಅಬ್ದುಲ್ಲ ಸೇವಂತಿಗುಡ್ಡೆ, ತೌಸೀಫ್ ಸೇವಂತಿಗುಡ್ಡೆ, ರಿಯಾಝ್ ಚೆಂಬುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ರಿಲೀಫ್ ಸರ್ವಿಸ್ ಚಯರ್ಮ್ಯಾನ್ ಅಲ್ತಾಫ್ ಕುಂಪಲ ಸ್ವಾಗತಿಸಿದರು.