ರಾಷ್ಟ್ರೀಯ

ವೆಲ್ಡರ್ ಪುತ್ರನಿಗೆ ಮೈಕ್ರೋಸಾಫ್ಟ್ ನಿಂದ ರೂ.1.2 ಕೋಟಿ ಮೊತ್ತದ ಜಾಬ್ ಆಫರ್!

Pinterest LinkedIn Tumblr

welder-son-microsoftಪಾಟ್ನಾ; ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬಿಟೆಕ್ ಓದುತ್ತಿರುವ ವಿದ್ಯಾರ್ಥಿಯ ಬುದ್ಧಿವಂತಿಕೆಯನ್ನು ಗುರ್ತಿಸಿರುವ ಅಮೆರಿಕ ಪ್ರತಿಷ್ಟಿತ ಮೈಕ್ರೋಸಾಫ್ಟ್ ಕಂಪನಿ ಇದೀಗ ಈ ಯುವಕನಿಗೆ ರು.1.2 ಕೋಟಿ ಸಂಪಾದಿಸುವ ಉದ್ಯೋಗಾವಕಾಶವೊಂದನ್ನು ನೀಡಿದೆ.

ವಾತ್ಸಲ್ಯ ಸಿಂಗ್ ಚೌಹ್ಹಾಣ್ (21) ಯುವಕನೇ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗಾವಕಾಶ ಪಡೆದಿರುವ ಯುವಕನಾಗಿದ್ದು, ಈತ ಸಂಹೌಲಿ ಗ್ರಾಹದ ಯುವಕನಾಗಿದ್ದಾನೆ. ಈತನ ತಂದೆ ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 6 ಸಹೋದರ ಹಾಗೂ ಸಹೋದರಿಯರನ್ನು ಹೊಂದಿರುವ ಈತ ಇಲ್ಲಿಯವರೆಗೂ ವಿದ್ಯಾಭ್ಯಾಸ ಮಾಡಿರುವುದೇ ದೊಡ್ಡ ಸಾಹಸ ಎಂದು ಹೇಳಬಹುದು.

ಬಿಹಾರದ ಹಿಂದಿ ಮಾಧ್ಯಮ ಶಾಲೆಯಲ್ಲಿ ವ್ಯಾಸಾಂಗ್ ಮಾಡಿದ ಈತ ಇದೀಗ ಖರಗ್ ಪುರದ ಐಐಠಿಯಲ್ಲಿ ಬಿಟೆಕ್ ಅಂತಿಮ ವರ್ಷ ವ್ಯಾಸಾಂಗ ಮಾಡುತ್ತಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ ಶೇ.75ರಷ್ಟು ಅಂಕ ಪಡೆದ ಈತ, ಕೋಟಾ ಮೂಲಕ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದ. ನಂತರ ಪ್ರವೇಶ ಪರೀಕ್ಷೆಯೊಂದರಲ್ಲಿ 382 ಅಂಕಗಳನ್ನು ಪಡೆದಿದ್ದ. ನಂತರ ಖರಗ್ಪುರದ ಐಐಟಿಯಲ್ಲಿ ತನ್ನ ವ್ಯಾಸಾಂಗವನ್ನು ಮುಂದುವರೆಸಿದ್ದ.

ಇದೀಗ ಈತನ ಬುದ್ಧಿವಂತಿಕೆ ಹಾಗೂ ಪ್ರತಿಭೆಯನ್ನು ಗುರ್ತಿಸಿರುವ ಅಮೆರಿಕದ ಪ್ರತಿಷ್ಟಿತ ಮೈಕ್ರೋಸಾಫ್ಟ್ ಕಂಪನಿ ಈತನಿಗೆ 1.2 ಕೋಟಿ ವೇತನದ ಜಾಬ್ ಆಫರ್ ನೀಡಿದೆ. ವಾತ್ಸಲ್ಯ ಬಿಟೆಕ್ ಅಂತಿಮ ವರ್ಷ ಓದುತ್ತಿದ್ದು, ಜೂನ್ ಅಂತಿಮದಲ್ಲಿ ವ್ಯಾಸಾಂಗ ಮುಗಿದ ಕೂಡಲೇ ಉದ್ಯೋಗಕ್ಕೆ ಸೇರ್ಪಡೆಯಾಗಲಿದ್ದಾನೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಾತ್ಸಲ್ಯ ತಂದೆ ಚಂದ್ರಕಾಂತ್ ಅವರು, ನಾನೊಬ್ಬ ದಿನಗೂಲಿ ಕಾರ್ಮಿಕನಾಗಿದ್ದು, ಮಗನ ವಿದ್ಯಾಭ್ಯಾಸಕ್ಕಾಗಿ ಲೋನ್ ತೆಗೆದುಕೊಳ್ಳುತ್ತಿದ್ದೆ. ಇದೀಗ ಮಗನ ಸಾಧನೆಗೆ ಬಹಳ ಗೌರವವಾಗುತ್ತಿದೆ ಎಂದು ಹೇಳಿ ಮಗನ ಸಾಧನೆಗೆ ಸಂತೋಷದ ಕಂಬನಿ ಮಿಡಿದಿದ್ದಾರೆ.

Write A Comment