ಅಂತರಾಷ್ಟ್ರೀಯ

182 ಮದರಸಾಗಳಿಗೆ ಪಾಕ್ ‘ಬೀಗಮುದ್ರೆ’: ಸೇನಾಶಾಲೆ ಮೇಲಿನ ದಾಳಿ ಬಳಿಕದ ಬೆಳವಣಿಗೆ

Pinterest LinkedIn Tumblr

Nawazಇಸ್ಲಾಮಾಬಾದ್ (ಪಿಟಿಐ): 2014ರ ಪೆಶಾವರ ಸೇನಾಶಾಲೆ ಮೇಲಿನ ಉಗ್ರರ ಭೀಕರ ದಾಳಿ ಘಟನೆ ನಂತರ ಪಾಕಿಸ್ತಾನವು ಈವರೆಗೂ 182 ಮದರಸಾಗಳಿಗೆ ಬೀಗಮುದ್ರೆ ಹಾಕಿದೆ.

ತೀವ್ರವಾದ ಉತ್ತೇಜಿಸುವ ಹಾಗೂ ಇತರ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ಪಂಜಾಬ್, ಸಿಂಧ್ ಹಾಗೂ ಖೈಬರ್ ಫಖ್ತುಂಖ್ವಾದಲ್ಲಿನ ಮದರಸಾಗಳನ್ನು ಮುಚ್ಚಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ ಸುದ್ದಿಸಂಸ್ಥೆ ವರದಿ ಮಾಡಿದೆ.

ಪೆಶಾವರ ಸೇನಾ ಶಾಲೆ ಮೇಲಿನ ಉಗ್ರರ ದಾಳಿ ಘಟನೆಯ ಬಳಿಕ ಅಸ್ತಿತ್ವಕ್ಕೆ ಬಂದಿರುವ ಭಯೋತ್ಪಾದನೆ ವಿರುದ್ಧದ ರಾಷ್ಟ್ರೀಯ ಕಾರ್ಯ ಯೋಜನೆ(ಎನ್‌ಎಪಿ) ಅಡಿಯಲ್ಲಿ ಈ ಕ್ರಮ ಜರುಗಿಸಲಾಗಿದೆ.

ಉಗ್ರರ ಆರ್ಥಿಕ ನೆರವಿಗೆ ಪೆಟ್ಟು ನೀಡುವ ಯತ್ನವಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನವು ಉಗ್ರ ಸಂಘಟನೆಗಳ ನಂಟಿರುವ 126 ಖಾತೆಗಳ ಒಂದು ಶತಕೋಟಿ ಪಾಕ್‌ ರೂಪಾಯಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕಾನೂನು ಪಾಲನಾ ಪಡೆಗಳು ಈವರೆಗೂ 25.1 ಕೋಟಿ ಪಾಕಿಸ್ತಾನ ರೂಪಾಯಿ ನಗದು ವಶಕ್ಕೆ ಪಡೆದಿವೆ.

ಇನ್ನು, 8,195 ಜನರ ಹೆಸರನ್ನು ಪಾಕ್‌ ಸರ್ಕಾರವು 19‌77ರ ಭಯೋತ್ಪಾದನಾ ತಡೆ ಕಾಯ್ದೆಯ ನಾಲ್ಕನೇ ಅನುಸೂಚಿಯಲ್ಲಿ ದಾಖಲಿಸಿಕೊಂಡಿದೆ. 188 ಜನರ ಹೆಸರುಗಳನ್ನು ದೇಶದಿಂದ ಹೊರಹೋಗುವವರ ನಿಗಾ ಪಟ್ಟಿಯಲ್ಲಿ ಇಟ್ಟಿದೆ. ಮತ್ತೊಂದೆಡೆ, 2, 052 ಉಗ್ರರ ಚಲನವನಲಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಅಂತೆಯೇ, ಇದೇ ಅವಧಿಯಲ್ಲಿ 1,026 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಸರ್ಕಾರ, 230 ಶಂಕಿತ ಉಗ್ರರನ್ನು ಬಂಧಿಸಿದೆ.

ಪಾಕಿಸ್ತಾನದಲ್ಲಿ 64 ನಿಷೇಧಿತ ಸಂಘಟನೆಗಳಿವೆ. ವಿಶ್ವಸಂಸ್ಥೆಯು ಪಾಕಿಸ್ತಾನದ 74 ಸಂಘಟನೆಗಳನ್ನು ಅಕ್ರಮ ಎಂದು ಘೋಷಿಸಿದೆ.

Write A Comment