ರಾಷ್ಟ್ರೀಯ

ಸರ್ಕಾರ, ಜೇಟ್ಲಿ, ಸಿಬಿಐ ವಿರುದ್ಧ ಕೀರ್ತಿ ಆಜಾದ್ ಕೋರ್ಟಿಗೆ

Pinterest LinkedIn Tumblr

1-Kirti-Azadನವದೆಹಲಿ: ಡಿಡಿಸಿಎ ಭ್ರಷ್ಟಾಚಾರ ಹಗರಣ ಸಂಬಂಧ ಬಿಜೆಪಿಯಿಂದ ಅಮಾನತುಗೊಂಡಿರುವ ಸಂಸದ ಕೀರ್ತಿ ಆಜಾದ್ ಕೇಂದ್ರ ಸರ್ಕಾರ, ಅರುಣ್ ಜೇಟ್ಲಿ ಮತ್ತು ಸಿಬಿಐ ವಿರುದ್ಧ ಕೋರ್ಟಿನಲ್ಲಿ ಖಟ್ಲೆ ಹೂಡುವುದಾಗಿ ಗುರುವಾರ ಪ್ರಕಟಿಸಿದರು.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೀರ್ತಿ ಆಜಾದ್ ಈ ವಿಷಯವನ್ನು ತಿಳಿಸಿದರು.

ಡಿಡಿಸಿಎ ಮತ್ತು ಹಾಕಿ ಇಂಡಿಯಾ ಸಂಸ್ಥೆಗಳಲ್ಲಿ ನಡೆದಿರುವ ಹಗರಣದಲ್ಲಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಪಾಲ್ಗೊಂಡಿದ್ದಾರೆ ಎಂದು ಕೀರ್ತಿ ಆಜಾದ್ ಕಳೆದ ಸೆಪ್ಟೆಂಬರ್ 13ರಂದು ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದರು. ಅದರೆ ಜೇಟ್ಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕೀರ್ತಿ ಆರೋಪಿಸಿದರು. ಈ ಪತ್ರದ ಪ್ರತಿಗಳನ್ನೂ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

Write A Comment