ರಾಷ್ಟ್ರೀಯ

ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿ

Pinterest LinkedIn Tumblr

1-Akash-webಬಾಲಸೋರ್ (ಒಡಿಶಾ): ಸ್ವದೇಶಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ನೆಲದಿಂದ ಆಕಾಶದ ಗುರಿಗಳನ್ನು ತಲುಪಬಲ್ಲ ಆಕಾಶ್ ಕ್ಷಿಪಣಿಯನ್ನು ಗುರುವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ವಾಯುಪಡೆಯು ಒಡಿಶಾದ ಬಾಲಸೋರ್ ಬಳಿಯ ಚಂಡಿಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಕ್ಷಿಪಣಿಯನ್ನು ಪರೀಕ್ಷಿಸಿತು.

ಈ ಕ್ಷಿಪಣಿಗಳು 60 ಕೆ.ಜಿ. ಸ್ಪೋಟಕ ಹೊತ್ತು 25 ಕಿ.ಮೀ. ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿವೆ. ವಿಮಾನ ನಿರೋಧಕ ರಕ್ಷಣಾ ವ್ಯವಸ್ಥೆಯ ಭಾಗವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದೆ. ಈ ಕ್ಷಿಪಣಿಯು ಸೂಪರ್​ಸಾನಿಕ್ ವೇಗದಲ್ಲಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಇದು 2.8 ರಿಂದ 3.5 ಮ್ಯಾಕ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 2015ರಲ್ಲಿ ಈ ಕ್ಷಿಪಣಿಗಳನ್ನು ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಈ ಕ್ಷಿಪಣಿಯು ಅಮೆರಿಕದ ಎಂಐಎಂ-104 ಕ್ಷಿಪಣಿಗೆ ಸರಿಸಮವಾಗಿದೆ. ಇದು ಯುದ್ಧ ವಿಮಾನ, ವೈಪರಿ ಪಡೆಗಳ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

Write A Comment