
ಮಂಗಳೂರು,ಜ.25 : ಭಾರತ್ ಸ್ಕೌಟ್ ಎಂಡ್ ಗೈಡ್ಸ್ ನಹಿರಿಯ ವಿಧ್ಯಾರ್ಥಿಗಳ ವಿಭಾಗವಾಗಿರುವ ರೋವರ್ಸ್ ಎಂಡ್ ರೇಂಜರ್ಸ್ ವಿಧ್ಯಾರ್ಥಿಗಳಿಗಾಗಿ ನಡೆಯುವ ರಾಷ್ಟ್ರ ಮಟ್ಟದ ಜಲ ಸಾಹಸ ಶಿಬಿರ -2016 ಮೂಲ್ಕಿಯ ಬಪ್ಪನಾಡು ಗ್ರಾಮದ ಕೊಳಚಿಕಂಬಳ ಬಳಿಯ ಸಮುದ್ರ ಮತ್ತು ಶಾಂಭವಿ ನದಿಯಲ್ಲಿ ಜ.27 ರಿಂದ 31 ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಎಂದು ದ ಕ ಜಿಲ್ಲಾಧಿಕಾರಿ ಹಾಗೂ ದ ಕ ಜಿಲ್ಲಾ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಘಟಕದ ಅಧ್ಯಕ್ಷ ಎ.ಬಿ ಇಬ್ರಾಹಿಂ ಅವರು ತಿಳಿಸಿದ್ದರು.

5 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಸುಮಾರು 250ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಭಾಗವಹಿಸುವವರು.
ರಾಷ್ಟ್ರಮಟ್ಟದ ಶಿಬಿರವು ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ದ.ಕ ಜಿಲ್ಲೆಯ ಮೂಲ್ಕಿಯಲ್ಲಿ ನಡೆಯುತ್ತಿರುವುದು ದಾಖಲೆಯಾಗಲಿದೆ. ಶಿಬಿರವು ಅಂತರಾಷ್ಟ್ರೀಯ ಮಟ್ಟದಲ್ಲಿ ಜಲ ಸಾಹಸ ಕ್ರೀಡೆಯಲ್ಲಿ ಪ್ರಸಿದ್ದಿಯಾಗಿರುವ ಆಮೇರಿಕಾ ದೇಶ ಮೂಲಕ ಮಂತ್ರ ಸರ್ಫ್ಕ್ಲಬ್ ಸಹಯೋಗದಲ್ಲಿ ವಿಶಿಷ್ಟ ರೀತಿಯ ಸಾಹಸ ಕ್ರೀಡೆಯ ತರಬೇತುದಾರರಿಂದ ವಿಧ್ಯಾರ್ಥಿಗಳಿಗೆ ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಗಿವುದು ಎಂದು ಅವರು ಹೇಳಿದರು.
ನೀರಿನಲ್ಲಿ ನಡೇಸುವ ವಿಶಿಷ್ಟ ರೀತಿಯ ಕ್ರೀಡೆ ಮತ್ತು ಪ್ರಕೃತಿ ವಿಕೋಪದಿಂದ ಉಂಟಾಗ ಬಹುದಾದ ದುರಂತಗಳ ಸಂಧರ್ಭ ಜನರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಪೂರಕವಾದ ವಿವಿಧ ರೀತಿಯ ರಕ್ಷಣಾ ಕಾರ್ಯಗಳ ಬಗ್ಗೆ ತರಬೇತಿಯನ್ನು ನೀಡಿ ವಿಧ್ಯಾರ್ಥಿಗಳು ಸಾಹಸಿ ಪ್ರವೃತ್ತಿಯಿಂದ ಬೆಳೆದು ಚೈತನ್ಯ ಶೀಲರಾಗುವಂತೆ ತರಬೇತಿಗೊಳಿಸುವುದು ಈಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ನಿತ್ಯವೂ ಮುಂಜಾನೆ 5 ಗಂಟೆಯಿಂದ ಯೋಗ,ಧ್ಯಾನ, ವ್ಯಾಯಾಮ, ಸರ್ವದರ್ಮ ಪ್ರಾರ್ಥನೆಯೊಂದಿಗೆ ಶಿಬಿರವು ಆರಂಭಗೊಂಡು ಸ್ವಚ್ಚ ಭಾರತ್ ಕಾರ್ಯಕ್ರಮದಡಿ ಈ ಪ್ರದೇಶದ ಸಮುದ್ರ ಜಿನಾರೆ ಶುಚಿತ್ವಗೊಳೀಸುವುದು, ನಮ್ಮ ನಾಡಿನ ವಿವಿಧ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುವುದು, ತುಳುನಾಡಿನ ಸಂಸ್ಕೃತಿಯ ಮಾಹಿತಿಗಾಗಿ ತುಳುನಾಡು ವೈಭವದಮ್ತಹ ಕಾರ್ಯಕ್ರಮಗಳು ವಿವಿಧ ರಾಜ್ಯಗಳ ಸಂಸ್ಕ್ರತಿಯನ್ನು ಬಿಂಬಿಸುವ ಕಾರ್ಯಕ್ರಮ ಶಿಭಿರಾರ್ಥಿಗಳಿಂದ ನಡೇಸುವುದು, ಭವ್ಯ ಶಿಬಿರಾಗ್ನಿ, ಪ್ರತಿನಿತ್ಯ ಸ್ಥಳೀಯ ಶಾಲೆಯ ಮತ್ತು ಕಾಲೇಜುಗಳ ವಿಧ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಹೊರ ರಾಜ್ಯಗಳಿಂದ ಬರುವ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡುವುದಕ್ಕಾಗಿ , ಮಂಗಳೂರಿನ ಎರಡು ರೈಲು ನಿಲ್ದಾಣಗಳಲ್ಲಿ ವಿಧ್ಯಾರ್ಥಿಗಳ ಮೂಲಕ ಮಾಹಿತಿ ನೀಡುವ ಕೆಲಸ ನಡೆಯಲಿದೆ. ಮೂಲ್ಕಿ ಬಸ್ಸು ನಿಲ್ದಾಣದಲ್ಲಿ ನೊಂದಣಿ ಕೇಂದ್ರವನ್ನು ತೆರೆಯಲಾಗುವುದಲ್ಲದೆ ಶಿಬಿರಾರ್ಥಿಗಳನ್ನು ಶಿಬಿರ ನಡೇಯುವ ಸ್ಥಳಕ್ಕೆ ತಲುಪಿಸುವ ವ್ಯಸಸ್ಥೆ ಗೊಳಿಸಲಾಗಿದೆ.