ರಾಷ್ಟ್ರೀಯ

ಶಾರುಖ್, ಸಲ್ಲು ವಿರುದ್ಧ ಕೈಗೊಂಡ ಕ್ರಮದ ವರದಿ ಸಲ್ಲಿಕೆಗೆ ಆಜ್ಞೆ

Pinterest LinkedIn Tumblr

22-shah-rukh-salman-khan-webನವದೆಹಲಿ: ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟುಮಾಡಿದ ಆಪಾದನೆ ಸಂಬಂಧಿತ ಶಾರುಖ್ ಮತ್ತು ಸಲ್ಮಾನ್ ಖಾನ್ ವಿರುದ್ಧ ಕೈಗೊಳ್ಳಲಾಗಿರುವ ಕ್ರಮದ ವರದಿಯನ್ನು ಸಲ್ಲಿಸುವಂತೆ ದೆಹಲಿ ನ್ಯಾಯಾಲಯವು ಪೊಲೀಸರಿಗೆ ಶುಕ್ರವಾರ ಆಜ್ಞಾಪಿಸಿದೆ.

ಕಾಳಿ ದೇವಾಲಯದ ಆವರಣವನ್ನು ಬಿಗ್ ಬಾಸ್ 9ಚಿತ್ರೀಕರಣ ಕಾಲದಲ್ಲಿ ಪ್ರವೇಶಿಸುವಾಗ ಶೂ ಕಳಚದೇ ಪ್ರವೇಶಿಸುವ ಮೂಲಕ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತ ಟಿವಿ ತಂಡದ ಸದಸ್ಯರು ಭಕ್ತರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ಆಪಾದಿಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.

ಈ ಪ್ರಕರಣವನ್ನು ಜನವರಿ 20ರಂದು ಅಂಗೀಕರಿಸಿದ್ದ ನ್ಯಾಯಾಲಯ ಜನವರಿ 22ರಂದು ಪ್ರಕರಣದ ವಿಚಾರಣೆಗೆ ದಿನ ನಿಗದಿ ಪಡಿಸಿತ್ತು. ಈದಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಕೆ ಗೌತಮ್ ಅವರ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು.

Write A Comment