ಭಾಗ್ಪತ್ (ಉತ್ತರ ಪ್ರದೇಶ): ಇಲ್ಲಿನ ಸ್ಥಳೀಯ ಪಂಚಾಯತ್ ಒಂದು ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಎಸಗಿದ್ದ ಮೂವರು ಕಾಮುಕರಿಗೆ ಕೇವಲ ಕಪಾಳಕ್ಕೆ ಐದೈದು ಏಟಿನ ಶಿಕ್ಷೆ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದೆ.
ಬಾಲಕಿಯನ್ನು ಶಾಲೆಯಿಂದ ವಾಪಾಸಾಗುತ್ತಿದ್ದ ವೇಳೆ ಅಪಹಿರಿಸಿದ್ದ ಮೂವರು ಕಾಮಾಂಧ ಯುವಕರು ಸರದಿಯಂತೆ ಅತ್ಯಾಚಾರ ಎಸಗಿದ್ದರು.
ಈ ವಿಚಾರ ಪಂಚಾಯತ್ ಮೆಟ್ಟಿಲೇರಿದ್ದು ಬಾಲಕಿಯ ಮೇಲಾದ ದೌರ್ಜನ್ಯದ ಅರಿವೇ ಇಲ್ಲದಂತೆ ಆರೋಪಿಗಳ ಕಪಾಳಕ್ಕೆ ತಲಾ ಐದೈದು ಏಟು ನೀಡುವಂತೆ ತೀರ್ಪು ನೀಡಿ ಕೈತೊಳೆದುಕೊಂಡಿದೆ.
ಈ ವಿಚಾರ ಇದೀಗ ಪೊಲೀಸರ ಗಮನಕ್ಕೆ ಬಂಧಿದ್ದು ,ಮೂವರು ಆರೋಪಿಗಳು ಹಾಗು ಪಂಚಾಯತ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗುತ್ತಿದೆ.
-ಉದಯವಾಣಿ