ರಾಷ್ಟ್ರೀಯ

ಸಭೆಯಲ್ಲಿ ನೀಲಿ ಚಿತ್ರ ನೋಡಿದ ಪಾಲಿಕೆ ಅಧಿಕಾರ ಅಮಾನತು

Pinterest LinkedIn Tumblr

porn-mobileಭೋಪಾಲ್: ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತಮ್ಮ ಮೊಬೈಲ್‌ನಲ್ಲಿ ನೀಲಿ ಚಿತ್ರಗಳ ಕ್ಲಿಪಿಂಗ್ ನೋಡುತ್ತಿದ್ದ ಭೋಪಾಲ್ ಮಹಾನಗರ ಪಾಲಿಕೆ(ಬಿಎಂಸಿ)ಯ ವಲಯ ಅಧಿಕಾರಿಯನ್ನು ಗುರುವಾರ ಅಮಾನತು ಮಾಡಲಾಗಿದೆ.

ಜನವರಿ 18ರಂದು ನಡೆದ ಸಾಮಾನ್ಯ ಸಭೆಯಲ್ಲಿ ಬಿಎಂಸಿ ವಲಯ ಅಧಿಕಾರಿ ಅನಿಲ್ ಶರ್ಮಾ ಅವರು ನೀತಿ ಚಿತ್ರ ನೋಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಭೆಯಲ್ಲಿ ಪಾಲಿಕೆ ಮೇಯರ್, ಆಯುಕ್ತರು ಹಾಗೂ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿ ನನ್ನ ಕೈ ಸೇರಿದ್ದು, ವರದಿಯಲ್ಲಿ ಅನಿಲ್ ಶರ್ಮಾ ಅವರು ನೀಲಿ ಚಿತ್ರ ನೋಡಿರುವುದು ಸಾಬೀತಾಗಿದೆ. ಹೀಗಾಗಿ ಅವರನ್ನು ಇಂದು ಅಮಾನತುಗೊಳಿಸಲಾಗಿದೆ ಎಂದು ಬಿಎಂಸಿ ಆಯುಕ್ತ ತೇಜಸ್ವಿ ನಾಯಕ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅನಿಲ್ ಶರ್ಮಾ ಅವರು ನೀಲಿ ಚಿತ್ರ ನೋಡುತ್ತಿರುವ ದೃಶ್ಯ ಟಿವಿ ವಾಹಿನಿಯಲ್ಲಿ ಪ್ರಸಾರವಾದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಎಂಸಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೇಮಶಂಕರ್ ಶುಕ್ಲಾ ಅವರು ತಿಳಿಸಿದ್ದಾರೆ.

Write A Comment