ಮನೋರಂಜನೆ

ವಿರಾಟ್ ಕೊಹ್ಲಿಗೆ ನಾಯಕತ್ವ ವಹಿಸಿ

Pinterest LinkedIn Tumblr

1sಭಾರತೀಯ  ಟೆಸ್ಟ್ ಕ್ರಿಕೆಟ್‌ಗೆ ನವ ಚೈತನ್ಯವನ್ನು ನೀಡಿ ತಂಡವನ್ನು ನಂಬರ್1 ಸ್ಥಾನಕ್ಕೆ ಕೊಂಡೊಯ್ದಿದ್ದ ಯುವ ಆಟಗಾರ ವಿರಾಟ್ ಕೊಹ್ಲಿಗೆ ಎಲ್ಲಾ ಮಾದರಿಯ  ನಾಯಕತ್ವವನ್ನು  ವಹಿಸಲು ಇದು ಸಕಾಲ ಎಂದು ಮಾಜಿ  ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತಿಳಿಸಿದ್ದಾರೆ.

ಟೆಸ್ಟ್ ನಾಯಕತ್ವ ವಹಿಸಿ ಕೊಂಡ ನಂತರ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಅಭೂತಪೂರ್ವ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ   ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸರಣಿಯಲ್ಲೂ ಉತ್ತಮ ಪ್ರದರ್ಶನವನ್ನು ತೋರಿಸುತ್ತಿದ್ದಾರೆ.

ಆಡಿದ 4 ಪಂದ್ಯಗಳಿಂದ 2 ಅರ್ಧಶತಕ ಹಾಗೂ 2 ಶತಕಗಳನ್ನೊಳಗೊಂಡಂತೆ 373 ರನ್‌ಗಳನ್ನು ಗಳಿಸಿರುವ ವಿರಾಟ್ ಕೊಹ್ಲಿಗೆ ನಾಯಕತ್ವ ವಹಿಸಿದರೆ ಏಕದಿನದಲ್ಲೂ   ಭಾರತ ಬಲಿಷ್ಠವಾಗಲಿದೆ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

Write A Comment