ರಾಷ್ಟ್ರೀಯ

ಒಳನುಸುಳಲು ಯತ್ನಿಸಿದ ಉಗ್ರ ಬಿಎಸ್​ಎಫ್ ಗುಂಡಿಗೆ ಬಲಿ

Pinterest LinkedIn Tumblr

1vಪಠಾಣ್​ಕೋಟ್: ಪಂಜಾಬ್​ನ ಪಠಾಣ್​ಕೋಟ್ ಜಿಲ್ಲೆಯ ಶೆಜ್ರಾ ಎಂಬಲ್ಲಿ ಪಾಕ್​ನಿಂದ ಭಾರತದೊಳಗೆ ನುಸುಳಲು ಯತ್ನಿಸಿದ ಉಗ್ರನೊಬ್ಬನನ್ನು ಬಿಎಸ್​ಎಫ್ ಯೋಧರು ಹೊಡೆದುರುಳಿಸಿದ್ದಾರೆ.

ಗುರುವಾರ ಬೆಳಿಗ್ಗೆ 6.40ರ ಸುಮಾರಿಗೆ ಮೂವರು ಉಗ್ರರು ಗಡಿ ಬೇಲಿ ಹಾರಿ ಒಳನುಸುಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬಿಎಸ್​ಎಫ್ ಯೋಧರು ಉಗ್ರರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಗೆ ಒಬ್ಬ ಉಗ್ರ ಮೃತಪಟ್ಟರೆ, ಮತ್ತಿಬ್ಬರು ಪಾಕಿಸ್ತಾನದೊಳಗೆ ಓಡಿಹೋಗಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಮತ್ತು ಪಠಾಣ್​ಕೋಟ್​ನಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ ಎಂದು ಬಿಎಸ್​ಎಫ್ ವಕ್ತಾರ ಐ.ಜಿ.ತಲಿವಾಲ್ ತಿಳಿಸಿದ್ದಾರೆ.

ಹೊಸ ವರ್ಷದ ದಿನ ಪಾಕ್​ನಿಂದ ಗಡಿ ನುಸುಳಿ ಬಂದ ಉಗ್ರರು ಪಠಾಣ್​ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದನ್ನು ಸ್ಮರಿಸಬಹುದು.

Write A Comment